ಹೇಗಿದೆ ನೋಡಿ ಪುನೀತ್​ ಕಟೌಟ್​ ತಯಾರಿ; ‘ಜೇಮ್ಸ್​’ ಚಿತ್ರದ ಅದ್ದೂರಿ ಬಿಡುಗಡೆಗೆ ದಿನಗಣನೆ

| Updated By: ಮದನ್​ ಕುಮಾರ್​

Updated on: Mar 05, 2022 | 5:44 PM

​ಮಾ.17ರಂದು ‘ಜೇಮ್ಸ್​’ ಬಿಡುಗಡೆ ಆಗಲಿದ್ದು, ಈಗ ಕಟೌಟ್​ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಕಲಾವಿದ ಆನಂದ್​.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರು ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜೇಮ್ಸ್​’ ಚಿತ್ರದ (James Movie) ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈಗಾಗಲೇ ರಿಲೀಸ್​ ಆಗಿರುವ ಟೀಸರ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಮಾ.17ರಂದು ಪುನೀರ್​ ರಾಜ್​ಕುಮಾರ್​ ಜನ್ಮದಿನ. ಅದೇ ದಿನ ‘ಜೇಮ್ಸ್​’ ತೆರೆ ಕಾಣುತ್ತಿರುವುದು ವಿಶೇಷ. ಈ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಕಲ ರೀತಿಯ ತಯಾರಿ ನಡೆಯುತ್ತಿದೆ. ಎಲ್ಲ ಚಿತ್ರಮಂದಿರಗಳ ಎದುರು ‘ಪವರ್​ ಸ್ಟಾರ್​’ ಕಟೌಟ್​ ರಾರಾಜಿಸಲಿದೆ. ಸದ್ಯ ಕಟೌಟ್​ (Puneeth Rajkumar Cutout) ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಕಲಾವಿದ ಆನಂದ್​. ‘ಅಪ್ಪು’ ಸಿನಿಮಾ ಕಾಲದಿಂದಲೂ ಆನಂದ್​ ಅವರೇ ಪುನೀತ್​ ಕಟೌಟ್​ ತಯಾರಿಸಿದ್ದು ಎಂಬುದು ವಿಶೇಷ. ಪುನೀತ್​ ಜೊತೆಗಿನ ಒಡನಾಟವನ್ನು ಆನಂದ್​ ನೆನಪಿಸಿಕೊಂಡಿದ್ದಾರೆ. ಒಂದೇ ಚಿತ್ರಮಂದಿರದಲ್ಲಿ 32 ಕಟೌಟ್​ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಪುನೀತ್​ರನ್ನು ನೆನೆದ ಜನಾರ್ದನ ​ರೆಡ್ಡಿ ಮಗ ಕಿರೀಟಿ

ಪಾದಯಾತ್ರೆಯಲ್ಲೂ ರಾರಾಜಿಸಿತು ಪುನೀತ್​ ಫೋಟೋ; ಎಂದೂ ಮರೆಯಾಗದು ಅಪ್ಪು ಮೇಲಿನ ಅಭಿಮಾನ

Follow us on