ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲಾ!

Updated on: Apr 15, 2026 | 4:36 PM

ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿದ್ದ ಉದ್ಘಾಟನಾ ರಿಬ್ಬನ್ ಅನ್ನು ಕತ್ತರಿಸಲು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನಿರಾಕರಿಸಿದರು. ಅದರ ಬದಲಾಗಿ ಅದನ್ನು ಬಿಚ್ಚಿ ಗೌರವದಿಂದ ಇಡಬೇಕೆಂಬ ಸೂಚನೆಯನ್ನು ನೀಡಿದರು. ಅಬ್ದುಲ್ಲಾ ಇಲ್ಲಿನ ಕಾಶ್ಮೀರ ಹಾತ್‌ನಲ್ಲಿ ನಡೆದ 'ನಿಮ್ಮ ಕುಶಲಕರ್ಮಿಗಳನ್ನು ತಿಳಿದುಕೊಳ್ಳಿ' ಕಾರ್ಯಕ್ರಮವನ್ನು ಉದ್ಘಾಟಿಸುವಾಗ ಈ ಘಟನೆ ನಡೆದಿದೆ. ಕ್ಯಾಮೆರಾ ಸಿಬ್ಬಂದಿಯಿಂದ ಸೆರೆಹಿಡಿಯಲ್ಪಟ್ಟ ಈ ದೃಶ್ಯವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಅವರ ಸಮಯಪ್ರಜ್ಞೆ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ರೀನಗರ, ಏಪ್ರಿಲ್ 15: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಕಾರ್ಯಕ್ರಮವೊಂದರಲ್ಲಿ, ತ್ರಿವರ್ಣದ ರಿಬ್ಬನ್‌ ಅನ್ನು ಕತ್ತರಿಯಿಂದ ಕಟ್ ಮಾಡಲು ನಿರಾಕರಿಸಿದ್ದಾರೆ. ಭಾರತದ ಧ್ವಜವಿರುವ ರಿಬ್ಬನ್ ಅನ್ನು ನಾನು ಕತ್ತರಿಸುವುದಿಲ್ಲ ಎಂದು ಹೇಳಿರುವ ಅವರು ಕಾರ್ಯಕ್ರಮದ ಆಯೋಜಕರಿಗೆ ಆ ರಿಬ್ಬನ್ ಅನ್ನು ಬಿಚ್ಚಿ ಸುತ್ತಿಡಲು ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಈ ನಿಲುವು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಯಕ್ರಮದ ಉದ್ಘಾಟನೆ ವೇಳೆ ತಾವು ಕತ್ತರಿಸಬೇಕಾಗಿದ್ದ ರಿಬ್ಬನ್‌ನಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಪಟ್ಟೆಗಳನ್ನು ಗಮನಿಸಿದ ಸಿಎಂ ತಕ್ಷಣ ಎಚ್ಚೆತ್ತುಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More