Video: ಕಳ್ಳತನ ಆರೋಪ, ಆರೋಪಿಯ ಶರ್ಟ್ ಬಿಚ್ಚಿ, ಚಪ್ಪಲಿ ಹಾರ ಹಾಕಿ ಪೊಲೀಸ್ ಜೀಪ್ನಲ್ಲಿ ಮೆರವಣಿಗೆ
ಕಳ್ಳತನ ಆರೋಪದಲ್ಲಿ ಪೊಲೀಸರು ಆರೋಪಿಯ ಶರ್ಟ್ ಬಿಚ್ಚಿಸಿ, ಚಪ್ಪಲಿ ಹಾರ ಹಾಕಿ, ಪೊಲೀಸ್ ಜೀಪ್ನಲ್ಲಿ ಮೆರವಣಿಗೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಈ ಘಟನೆಯು ವಿವಾದಕ್ಕೆ ಸಿಲುಕಿದೆ. ಈ ವ್ಯಕ್ತಿಯನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದ್ದು, ಮೆರಿಕಲ್ ಶಾಪ್ನಲ್ಲಿ ಔಷಧಿ ತೆಗೆದುಕೊಳ್ಳುವಾಗ ಹಣ ಕದ್ದಿದ್ದಾನೆಂದು ಆರೋಪಿಸಲಾಗಿದೆ. ಪೊಲೀಸರ ಈ ಕ್ರಮದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಎಲ್ಲೆಡೆ ಟೀಕೆಗೆ ಗುರಿಯಾಗಿದೆ.
ಜಮ್ಮು ಮತ್ತು ಕಾಶ್ಮೀರ, ಜೂನ್ 25: ಕಳ್ಳತನ ಆರೋಪದಲ್ಲಿ ಪೊಲೀಸರು ಆರೋಪಿಯ ಶರ್ಟ್ ಬಿಚ್ಚಿಸಿ, ಚಪ್ಪಲಿ ಹಾರ ಹಾಕಿ, ಪೊಲೀಸ್ ಜೀಪ್ನಲ್ಲಿ ಮೆರವಣಿಗೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಈ ಘಟನೆಯು ವಿವಾದಕ್ಕೆ ಸಿಲುಕಿದೆ. ಈ ವ್ಯಕ್ತಿಯನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದ್ದು, ಮೆರಿಕಲ್ ಶಾಪ್ನಲ್ಲಿ ಔಷಧಿ ತೆಗೆದುಕೊಳ್ಳುವಾಗ ಹಣ ಕದ್ದಿದ್ದಾನೆಂದು ಆರೋಪಿಸಲಾಗಿದೆ. ಪೊಲೀಸರ ಈ ಕ್ರಮದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಎಲ್ಲೆಡೆ ಟೀಕೆಗೆ ಗುರಿಯಾಗಿದೆ ಮತ್ತು ಪೊಲೀಸರು ತಮ್ಮ ಸಿಬ್ಬಂದಿಯ ನಡವಳಿಕೆಯನ್ನು ಖಂಡಿಸಿದ್ದಾರೆ. ಬಕ್ಷಿ ನಗರ ಪ್ರದೇಶದಲ್ಲಿ ಘಟನೆ ನಡೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos