VIDEO: ಮಗಾ… ಚೆನ್ನಾಗಿ ಹೋಗ್ತಿದೆ… ಆಂಗ್ಲರ ನಾಡಿನಲ್ಲಿ ಕನ್ನಡದ ಕಂಪು
India vs England: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ನಲ್ಲಿ 471 ರನ್ ಕಲೆಹಾಕಿದರೆ, ಇಂಗ್ಲೆಂಡ್ 465 ರನ್ ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ತಂಡವು 364 ರನ್ ಗಳಿಸಿ ಆಲೌಟ್ ಆಯಿತು. ಅದರಂತೆ 371 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 82 ಓವರ್‌ಗಳಲ್ಲಿ 373 ರನ್ ಬಾರಿಸಿ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ ಆಂಗ್ಲರ ನಾಡಿನಲ್ಲಿ ಕೇಳಿ ಬಂದ ಕನ್ನಡ. ಹೌದು, ಹೆಡಿಂಗ್ಲೆ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಕನ್ನಡದಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ.
ಇಂಗ್ಲೆಂಡ್ ದಾಂಡಿಗ ಜೋ ರೂಟ್ ಬ್ಯಾಟಿಂಗ್ ಮಾಡುತ್ತಿದ್ದ ವೇಗಿ ಪ್ರಸಿದ್ಧ್ ಕೃಷ್ಣ ಫೀಲ್ಡಿಂಗ್ ಬದಲಿಸಲು ಬಯಸಿದ್ದರು. ಈ ವೇಳೆ ಸ್ಲಿಪ್ ನಲ್ಲಿದ್ದ ಕೆಎಲ್ ರಾಹುಲ್, ಮಗಾ ಚೆನ್ನಾಗಿ ಹೋಗ್ತಿದೆ, ಫೀಲ್ಡರ್ ಅಲ್ಲೇ ಇರಲಿ, ಬದಲಿಸಬೇಡ ಎಂದು ಕನ್ನಡದಲ್ಲೇ ಸಲಹೆ ನೀಡಿದ್ದರು. ಕನ್ನಡಿಗರಿಬ್ಬರ ಈ ಮಾತುಕತೆ ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದ್ದು, ಇದೀಗ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ನಲ್ಲಿ 471 ರನ್ ಕಲೆಹಾಕಿದರೆ, ಇಂಗ್ಲೆಂಡ್ 465 ರನ್ ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ತಂಡವು 364 ರನ್ ಗಳಿಸಿ ಆಲೌಟ್ ಆಯಿತು. ಅದರಂತೆ 371 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 82 ಓವರ್‌ಗಳಲ್ಲಿ 373 ರನ್ ಬಾರಿಸಿ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.