Video: ಕಳ್ಳತನ ಆರೋಪ, ಆರೋಪಿಯ ಶರ್ಟ್​ ಬಿಚ್ಚಿ, ಚಪ್ಪಲಿ ಹಾರ ಹಾಕಿ ಪೊಲೀಸ್ ಜೀಪ್​ನಲ್ಲಿ ಮೆರವಣಿಗೆ

Updated on: Jun 25, 2025 | 8:11 AM

ಕಳ್ಳತನ ಆರೋಪದಲ್ಲಿ ಪೊಲೀಸರು ಆರೋಪಿಯ ಶರ್ಟ್​ ಬಿಚ್ಚಿಸಿ, ಚಪ್ಪಲಿ ಹಾರ ಹಾಕಿ, ಪೊಲೀಸ್​ ಜೀಪ್​ನಲ್ಲಿ ಮೆರವಣಿಗೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಈ ಘಟನೆಯು ವಿವಾದಕ್ಕೆ ಸಿಲುಕಿದೆ. ಈ ವ್ಯಕ್ತಿಯನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದ್ದು, ಮೆರಿಕಲ್ ಶಾಪ್​ನಲ್ಲಿ ಔಷಧಿ ತೆಗೆದುಕೊಳ್ಳುವಾಗ ಹಣ ಕದ್ದಿದ್ದಾನೆಂದು ಆರೋಪಿಸಲಾಗಿದೆ. ಪೊಲೀಸರ ಈ ಕ್ರಮದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಎಲ್ಲೆಡೆ ಟೀಕೆಗೆ ಗುರಿಯಾಗಿದೆ.

ಜಮ್ಮು ಮತ್ತು ಕಾಶ್ಮೀರ, ಜೂನ್ 25: ಕಳ್ಳತನ ಆರೋಪದಲ್ಲಿ ಪೊಲೀಸರು ಆರೋಪಿಯ ಶರ್ಟ್​ ಬಿಚ್ಚಿಸಿ, ಚಪ್ಪಲಿ ಹಾರ ಹಾಕಿ, ಪೊಲೀಸ್​ ಜೀಪ್​ನಲ್ಲಿ ಮೆರವಣಿಗೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಈ ಘಟನೆಯು ವಿವಾದಕ್ಕೆ ಸಿಲುಕಿದೆ. ಈ ವ್ಯಕ್ತಿಯನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದ್ದು, ಮೆರಿಕಲ್ ಶಾಪ್​ನಲ್ಲಿ ಔಷಧಿ ತೆಗೆದುಕೊಳ್ಳುವಾಗ ಹಣ ಕದ್ದಿದ್ದಾನೆಂದು ಆರೋಪಿಸಲಾಗಿದೆ. ಪೊಲೀಸರ ಈ ಕ್ರಮದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಎಲ್ಲೆಡೆ ಟೀಕೆಗೆ ಗುರಿಯಾಗಿದೆ ಮತ್ತು ಪೊಲೀಸರು ತಮ್ಮ ಸಿಬ್ಬಂದಿಯ ನಡವಳಿಕೆಯನ್ನು ಖಂಡಿಸಿದ್ದಾರೆ. ಬಕ್ಷಿ ನಗರ ಪ್ರದೇಶದಲ್ಲಿ ಘಟನೆ ನಡೆದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More