ಜನಾರ್ಧನ ರೆಡ್ಡಿಯನ್ನು 2008ರಿಂದ ಎದುರಿಸುತ್ತಿದ್ದೇವೆ, ಅವರಿಂದ ಆತಂಕವಿಲ್ಲ: ಅನ್ನಪೂರ್ಣ
ತಮ್ಮ ಪರ ಪ್ರಚಾರ ಮಾಡಲು ಸಿಎಂ, ಡಿಸಿಎಂ ಮತ್ತು ಇನ್ನೂ ಹಲವಾರು ಪ್ರಮುಖ ನಾಯಕರು ಬರಲಿದ್ದಾರೆಂದ ಅನ್ನಪೂರ್ಣ, ಸಿದ್ದರಾಮಯ್ಯ ಸರ್ಕಾರ ಘೋಷಿಸಿ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ಮತ ಕೇಳುವುದಾಗಿ ಹೇಳಿದರು.
ಬಳ್ಳಾರಿ: ಸಂಡೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಂಸದ ಇ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ತಮ್ಮ ಪಕ್ಷದ ಎಲ್ಲ ಹಿರಿಯ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದರು. ಬಿಜೆಪಿ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಸಂಡೂರಲ್ಲಿ ಮನೆ ಮಾಡಿ ಪಕ್ಷದ ಅಭ್ಯರ್ಥಿಗಾಗಿ ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದಾಗ, ರೆಡ್ಡಿ ಅವರನ್ನು 2008ರಿಂದ ಎದುರಿಸಿಕೊಂಡು ಬಂದಿದ್ದೇವೆ, ಅವರು ತನ್ನ ಗೆಲುವಿಗೆ ಥ್ರೆಟ್ ಅನಿಸಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂಡೂರು ಕ್ಷೇತ್ರದ ಟಿಕೆಟ್ ಸಂಸದ ಇ ತುಕಾರಾಂ ಪತ್ನಿಗೆ: ಸಿದ್ದರಾಮಯ್ಯ
Published on: Oct 24, 2024 01:32 PM
Latest Videos

ಸಿಎಸ್ಕೆ ಬೌಲರ್ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ

ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
