ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು

Edited By:

Updated on: Dec 13, 2024 | 9:48 AM

ಅಮೆರಿಕದ ಡೆಕ್ಕನ್ ಹೆರಿಟೇಜ್ ಸಂಸ್ಥೆಯು ಮೈಸೂರಿನ ಜಯಲಕ್ಷ್ಮೀ ವಿಲಾಸ ಅರಮನೆಯ ಪುನರ್ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಅಮೆರಿಕ ರಾಯಭಾರ ಕಚೇರಿಯು 2.4 ಕೋಟಿ ರೂಪಾಯಿಗಳ ನೆರವು ನೀಡಿದೆ. ಅಮೆರಿಕದ ಪಬ್ಲಿಕ್ ಡಿಪ್ಲೊಮಸಿ ಅಧಿಕಾರಿ ಜೀನ್ ಬ್ರಿಗ್ಯಾಂಟಿಯವರು ಅರಮನೆಗೆ ಭೇಟಿ ನೀಡಿ, ರಾಜರ ಕಾಲದ ವಸ್ತುಗಳನ್ನು ವೀಕ್ಷಿಸಿದರು. 2025ರ ವೇಳೆಗೆ ಪುನರ್ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಮೈಸೂರು, ಡಿಸೆಂಬರ್​ 13: ಮೈಸೂರು (Mysore) ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆ (Jayalaxmi Vilas Palace) ಕಾಯಕಲ್ಪಕ್ಕೆ ಅಮೆರಿಕದ ಡೆಕ್ಕನ್ ಹೆರಿಟೇಜ್ ಸಂಸ್ಥೆ ಮುಂದಾಗಿದೆ. ಅಮೆರಿಕದ ಪಬ್ಲಿಕ್ ಡಿಪ್ಲೊಮಸಿ ಅಧಿಕಾರಿ ಜೀನ್ ಬ್ರಿಗ್ಯಾಂಟಿಯವರು ಜಯಲಕ್ಷ್ಮೀ ವಿಲಾಸ ಅರಮನೆಗೆ ಭೇಟಿ ನೀಡಿ, ರಾಜರ ಕಾಲದ ವಸ್ತುಗಳು, ಒಡವೆ, ಆಯುಧಗಳನ್ನು ವೀಕ್ಷಿಸಿದರು. ಅರಮನೆ ಮತ್ತು ಅಲ್ಲಿನ ಕಲಾಕೃತಿಗಳ ರಕ್ಷಣೆಗೆ ಅಮೆರಿಕ ರಾಯಭಾರ ಕಚೇರಿಯಿಂದ 2.4 ಕೋಟಿ ರೂ. ನೆರವು ನೀಡಿದೆ. 2025ಕ್ಕೆ ಅರಮನೆಯ ಸಂರಕ್ಷಣೆ ಕಾರ್ಯ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ