Ramzan street food: ಕಲಬುರಗಿ ಪೊಲೀಸ್ ಕಮೀಶನರ್ ರಿಂದ ಅಗೌರವದ ಮಾತು, ವ್ಯಗ್ರಗೊಂಡ ಜೆಡಿಎಸ್ ನಾಯಕನ ಧರಣಿ

Ramzan street food: ಕಲಬುರಗಿ ಪೊಲೀಸ್ ಕಮೀಶನರ್ ರಿಂದ ಅಗೌರವದ ಮಾತು, ವ್ಯಗ್ರಗೊಂಡ ಜೆಡಿಎಸ್ ನಾಯಕನ ಧರಣಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 07, 2023 | 10:24 AM

ಕಮೀಶನರ್ ಭಾಷೆಯಿಂದ ವ್ಯಗ್ರರಾಗುವ ಉಸ್ತಾದ್ ವ್ಯಾಪಾರಸ್ಥರೊಂದಿಗೆ ನೆಲದ ಮೇಲೆ ಕೂತು ಪ್ರತಿಭಟನೆ ನಡೆಸಿದ್ದಾರೆ.

ಕಲಬುರಗಿ: ರಂಜಾನ್ ತಿಂಗಳಲ್ಲಿ, ಸ್ಟ್ರೀಟ್ ಫುಡ್, ಫುಡ್ ಕೋರ್ಟ್ ಗಳು (food court) ರಸ್ತೆಗಳ ಮೇಲೆ ತಲೆ ಎತ್ತುವುದು ಸಾಮಾನ್ಯ. ಇದು ಎಲ್ಲ ನಗರಗಳಲ್ಲಿ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಂಡುಬರುವ ದೃಶ್ಯ. ತಿಂಡಿ ಪದಾರ್ಥಗಳನ್ನು ಮಾರುವ ಅಂಗಡಿಗಳ ಮುಂದೆ ಅಧಿಕ ಸಂಖ್ಯೆಯಲ್ಲಿ ಜನ ಜಮಾಯಿಸುವುದರಿಂದ ಜನ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಕಲಬುರಗಿಯ ಮುಸ್ಲಿಂ ಚೌಕ್ ನಲ್ಲಿ ಹೀಗೆ ಟ್ರಾಫಿಕ್ ಜಾಮ್ ಆದಕಾರಣ ಅಂಗಡಿಗಳನ್ನು ತೆರವು ಮಾಡಲು ತಮ್ಮ ಸಿಬ್ಬಂದಿಯೊಂದಿಗೆ ಕಲಬುರಗಿ ಪೊಲೀಸ್ ಕಮೀಶನರ್ ಆರ್ ಚೇತನ್ (R Chethan) ಆಗಮಿಸಿದ್ದಾರೆ. ಅಂಗಡಿಗಳನ್ನು ತೆರವು ಮಾಡುವಂತೆ ಪೊಲೀಸರು ಹೇಳಿದಾಗ ವ್ಯಾಪಾರಸ್ಥರ ಪರ ಮಾತಾಡಲು ಸ್ಥಳೀಯ ಜೆಡಿಎಸ್ ನಾಯಕ ನಾಸ್ಸೆರ್ ಹುಸ್ಸೇನ್ ಉಸ್ತಾದ್ (Nasser Hussain Ustad) ಮುಂದಾದಾಗ ಚೇತನ್ ಏಕಕವಚನದಲ್ಲಿ ಮಾತಾಡಿದ್ದಾರೆ. ಕಮೀಶನರ್ ಭಾಷೆಯಿಂದ ವ್ಯಗ್ರರಾಗುವ ಉಸ್ತಾದ್ ವ್ಯಾಪಾರಸ್ಥರೊಂದಿಗೆ ನೆಲದ ಮೇಲೆ ಕೂತು ಪ್ರತಿಭಟನೆ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ