10 ಕೆಜಿ ದೇಹದ ತೂಕ ಇಳಿಸಿಕೊಂಡ ಶುಭಾ ಪೂಂಜಾ; ಹೇಗೆ ಎನ್ನುವ ಗುಟ್ಟು ಬಿಟ್ಟುಕೊಟ್ಟ ನಟಿ

10 ಕೆಜಿ ದೇಹದ ತೂಕ ಇಳಿಸಿಕೊಂಡ ಶುಭಾ ಪೂಂಜಾ; ಹೇಗೆ ಎನ್ನುವ ಗುಟ್ಟು ಬಿಟ್ಟುಕೊಟ್ಟ ನಟಿ

ರಾಜೇಶ್ ದುಗ್ಗುಮನೆ
|

Updated on: Apr 07, 2023 | 8:18 AM

‘ತ್ರಿದೇವಿ’ ಸಿನಿಮಾದಲ್ಲಿ ಶುಭಾ ಪೂಂಜಾ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಾಗಲೇ ಅವರು 10 ಕೆಜಿ ದೇಹದ ತೂಕ ಇಳಿಸಿಕೊಂಡಿದ್ದಾರೆ. ‘

‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ನಟಿ ಶುಭಾ ಪೂಂಜಾ (Shubha Poonja) ಅವರು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹಲವು ಚಿತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ತ್ರಿದೇವಿ’ ಸಿನಿಮಾದಲ್ಲಿ (Tridevi Movie) ಅವರು ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಾಗಲೇ ಅವರು 10 ಕೆಜಿ ದೇಹದ ತೂಕ ಇಳಿಸಿಕೊಂಡಿದ್ದಾರೆ. ‘ಚಿತ್ರಕ್ಕಾಗಿ ಸಾಕಷ್ಟು ಓಡಬೇಕಿತ್ತು. ಇದರ ಜೊತೆ ಯೋಗ ಮಾಡಿದ್ದೇನೆ. ಇನ್ನೂ 6 ಕೆಜಿ ದೇಹದ ತೂಕ ಇಳಿಸಿಕೊಳ್ಳಬೇಕು ಎಂಬುದು ನನ್ನ ಉದ್ದೇಶ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ