Assembly Polls: ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ!

|

Updated on: Feb 04, 2023 | 5:04 PM

ತಮ್ಮ ಕುಟುಂಬ ಕುರಿತು ಕುಟುಂಬ ರಾಜಕರಣದ ಬಗ್ಗೆ ಮಾತಾಡುತ್ತಿರುವ ಜವರೇಗೌಡ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗಿ ವರ್ಷಗಳೇ ಕಳೆದಿವೆ. ಅಂಥವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು

ಬೆಂಗಳೂರು:  ಜೆಡಿಎಸ್ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಕೊನೆಗೂ ಕುಟುಂಬ ರಾಜಕಾರಣವನ್ನು (dynastic politics) ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತಾಡಿದ ಅವರು ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲ್ಲಿ ಇದೆ ಎಂದ ಕುಮಾರಸ್ವಾಮಿ ಹೆಚ್ ಡಿ ದೇವೇಗೌಡರ (HD Devegowda) ಕುಟುಂಬ ಕೇವಲ ಅನಿವಾರ್ಯತೆ ಎದುರಾದಾಗ ಮಾತ್ರ ಕುಟುಂಬದ ಸದಸ್ಯರನ್ನು ರಾಜಕಾರಣಕ್ಕೆ ತಂದಿದೆ ಅಂತ ಹೇಳಿದರು. ತಮ್ಮ ಕುಟುಂಬ ಕುರಿತು ಕುಟುಂಬ ರಾಜಕರಣದ ಬಗ್ಗೆ ಮಾತಾಡುತ್ತಿರುವ ಜವರೇಗೌಡ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗಿ ವರ್ಷಗಳೇ ಕಳೆದಿವೆ. ಅಂಥವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 04, 2023 05:02 PM