ಕೋಲಾರ: ಚುನಾವಣೆ ದಿನಗಳು ಹತ್ತಿರವಾಗುತ್ತಿರುವಂತೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ನಡುವಿನ ಹೊಂದಾಣಿಕೆ, ಸಮನ್ವಯತೆ, ಬಾಂಧವ್ಯ ಬಲಗೊಳ್ಳುತ್ತಾ ಸಾಗಿದೆ. ಇದು ಕಾಂಗ್ರೆಸ್ ಎದುರಾಳಿ ಪಕ್ಷಗಳಿಗೆ ಅಪಾಯದ ಗಂಟೆ ಮತ್ತು ಜೀರ್ಣೀಸಿಕೊಳ್ಳಾಗದ ಸತ್ಯ. ಕೋಲಾರದಲ್ಲಿ ಪ್ರಜಾಧ್ವನಿ ಯಾತ್ರೆ (Prajadhvani Yatre) ನಡೆಸುತ್ತಿರುವ ಶಿವಕುಮಾರ್ ಮಾತು ಕೇಳಿಸಿಕೊಳ್ಳಿ. ಕಾಂಗ್ರೆಸ್ ಪಕ್ಷ ನೀಡಿರುವ ಆಶ್ವಾಸನೆಗಳನ್ನು ಈಡೇರಿಸದಿದ್ದರೆ; ನಾನಾಗಲೀ, ಸಿದ್ದರಾಮಯ್ಯನವರಾಗಲೀ ನಿಮ್ಮ ಮುಂದೆ ಮತ್ಯಾವತ್ತೂ ವೋಟು ಕೇಳಲು ಬರುವುದಿಲ್ಲ ಅನ್ನುತ್ತಾರೆ. ಮುಂದುವರಿದು ಅವರು ಸಿದ್ದರಾಮಯ್ಯ ಉತ್ತರ ಕರ್ನಾಟಕದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದಾರೆ, ನಾನು ದಕ್ಷಿಣ ಕರ್ನಾಟಕದಲ್ಲಿ ನಡೆಸುತ್ತಿದ್ದೇನೆ ಅಂತ ಹೇಳುತ್ತಾರೆ. ತಮ್ಮ ಮಾತಿನಲ್ಲಿ ಪದೇಪದೆ ಸಿದ್ದರಾಮಯ್ಯನವರ ಉಲ್ಲೇಖವನ್ನು ಶಿವಕುಮಾರ್ ಮಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ