ನಾಟಕದಲ್ಲಿಯೂ ಮೊಳಗಿದ ಸಿದ್ದರಾಮಯ್ಯ ಸಿಎಂ ಕೂಗು, ಡೈಲಾಗ್ ಹೊಡೆದ ಚಕ್ರವರ್ತಿ
ಸಿದ್ದು ಮುಂದಿನ ಮುಖ್ಯಮಂತ್ರಿ ಎಂಬ ಕೂಗು ನಾಟಕದಲ್ಲಿಯೂ ಸದ್ದು ಮಾಡಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಮಲಕನಮರಡಿ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ: ಸಿದ್ದರಾಮಯ್ಯ (Siddaramaiah) ಮುಂದಿನ ಮುಖ್ಯಮಂತ್ರಿ ಎಂಬ ಕೂಗು ನಾಟಕದಲ್ಲಿಯೂ ಸದ್ದು ಮಾಡಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಮಲಕನಮರಡಿ ಗ್ರಾಮದಲ್ಲಿ ನಡೆದಿದೆ. ರಾಜ್ಯದಲ್ಲಿ ರಾಯಣ್ಣ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಮಾಡಲಾಗಿದ್ದು, ಈ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಫೋಟೋ ಹಿಡಿದು ಚಕ್ರವರ್ತಿ ಪಾತ್ರದಾರಿ ಡೈಲಾಗ್ ಹೊಡೆದಿದ್ದಾರೆ. ಸದ್ಯ ಈ ಕುರಿತಾದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಿದ್ದರಾಮಯ್ಯ ಫೋಟೋ ಹಿಡಿದು ಡೈಲಾಗ್ ಹೇಳಿದ್ದ ದೃಶ್ಯಕ್ಕೆ ಜನರು ಸಿಳ್ಳೆ, ಕೆಕೆ ಹಾಕಿದ್ದಾರೆ. ಸಿದ್ದರಾಮಯ್ಯ ಫೋಟೋಗೆ ಕೌಂಟರ್ ಕೊಡುವುದಕ್ಕೆ ಮತ್ತೊಬ್ಬ ಪಾತ್ರಧಾರಿ ಶ್ರೀರಾಮುಲು ಫೋಟೋ ಹಿಡಿದು ಬಂದಿದ್ದು ವಿಶೇಷವಾಗಿತ್ತು. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos