ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು: ಲತಾಕುಮಾರಿ ವಿರುದ್ಧ ಹರಿಹಾಯ್ದ ಶಾಸಕ ಹೆಚ್​ಪಿ ಸ್ವರೂಪ್‌ಪ್ರಕಾಶ್

Edited By:

Updated on: Nov 11, 2026 | 4:33 PM

ಮುಖ್ಯಾಂಶಗಳು

  • ಡಿಸಿ ಕೆಎಸ್. ಲತಾಕುಮಾರಿ ವಿರುದ್ಧ ಶಾಸಕ ಹೆಚ್​ಪಿ ಸ್ವರೂಪ್‌ಪ್ರಕಾಶ್ ಆಕ್ರೋಶ
  • ಜಿಲ್ಲಾಧಿಕಾರಿ ಹೇಳಿಕೆ ನಮ್ಮ ಮನಸ್ಸಿಗೆ ನೋವು ತಂದಿದೆ ಎಂದ ಶಾಸಕ
  • ಜಿಲ್ಲಾಧಿಕಾರಿ ಹಾಸನ ಜಿಲ್ಲೆಗೆ ಸಿಕ್ಕಿರುವುದು ನಮ್ಮ ದೌರ್ಬಾಗ್ಯ

ಈ ವರ್ಷದ ಹಾಸನಾಂಬೆ ಜಾತ್ರೆ ನಿರ್ವಹಣೆ ಕುರಿತು ಜೆಡಿಎಸ್​​ ಶಾಸಕ ಹೆಚ್​ಪಿ ಸ್ವರೂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸುಸೂತ್ರವಾಗಿ ನಡೆದ ಜಾತ್ರೆಗೆ ಹೋಲಿಸಿದರೆ, ಈ ಬಾರಿ ಪ್ರೋಟೋಕಾಲ್, ಧರ್ಮದರ್ಶನ ಮತ್ತು ಗೋಲ್ಡ್ ಕಾರ್ಡ್ ವಿತರಣೆಯಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಸ್ವರೂಪ್ ಆರೋಪಿಸಿದ್ದಾರೆ.

ಹಾಸನ, ನವೆಂಬರ್​​ 11: ‘ಆ ಜಿಲ್ಲಾಧಿಕಾರಿಯನ್ನ ಎಲ್ಲಿಂದ ಕರೆದುಕೊಂಡು ಬಂದಿದ್ದಾರೆ ಗೊತ್ತಿಲ್ಲ. ಮೊದಲ ದಿನದಿಂದಲೂ ಹೇಳುತ್ತಿದ್ದೇನೆ, ಇಲ್ಲಿ ಶಿವಲಿಂಗೇಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವರಲ್ಲ, ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರು’ ಎಂದು ಜೆಡಿಎಸ್​ ಶಾಸಕ ಹೆಚ್​​ಪಿ ಸ್ವರೂಪ್‌ಪ್ರಕಾಶ್​​, ಡಿಸಿ ಲತಾಕುಮಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯಾರು ಕೂಡ ನನ್ನನ್ನು ಅಭಿನಂದನಾ ಕಾರ್ಯಕ್ರಮಕ್ಕೆ ಕರೆದಿಲ್ಲ. ಹಾಸನದಲ್ಲಿ ಈ ಜಿಲ್ಲಾಧಿಕಾರಿ ಇರುವ ತನಕ ಅವರು ಇರುವ ವೇದಿಕೆ ಕಾರ್ಯಕ್ರಮಕ್ಕೆ ನಾನು ಬರಲ್ಲ ಎಂದು ಸಂಸದರಿಗೆ ಹೇಳಿದ್ದೇನೆ. ಜಿಲ್ಲಾಧಿಕಾರಿ ಕೆಲಸ ಮಾಡುತ್ತಿಲ್ಲ, ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಜಿಲ್ಲಾಧಿಕಾರಿ ಹಾಸನ ಜಿಲ್ಲೆಗೆ ಸಿಕ್ಕಿರುವುದು ನಮ್ಮ ದೌರ್ಬಾಗ್ಯ, ಮನಸ್ಸಿಗೆ ನೋವಾಗುತ್ತೆ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More