ನಿಖಿಲ್ ಕುಮಾರಸ್ವಾಮಿಯೊಂದಿಗೆ ಮಾತಾಡಿದರೂ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ ಗೊಂದಲಗಳು ದೂರವಾಗಿಲ್ಲ!
ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡಿದ ಶರಣಗೌಡ, ತಮ್ಮ ಅನಿಸಿಕೆ, ಸಲಹೆಗಳನ್ನು ನಿಖಿಲ್ ಗೆ ತಿಳಿಸಿದ್ದು ಅವರು ಅದನ್ನು ಕುಮಾರಸ್ವಾಮಿಯವರಿಗೆ ರವಾನಸಿದ್ದಾರೆ ಎಂದರು. ಅಂದರೆ ಮೈತ್ರಿಗೆ ನಿಮ್ಮ ಅನುಮೋದನೆ ಇದೆಯೇ ಅಂತ ಕೇಳಿದರೆ ಅವರಲ್ಲಿ ಸ್ಪಷ್ಟ ಉತ್ತರವಿರಲಿಲ್ಲ!
ಬೆಂಗಳೂರು: ಗುರುಮಠಕಲ್ ಕ್ಷೇತ್ರ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ (Sharangouda Kandkur) ಭಾರೀ ಗೊಂದಲದಲ್ಲಿದ್ದಾರೆ, ಅವರ ಮಾತುಗಳಿಂದ ಅದು ಸ್ಪಷ್ಟವಾಗುತ್ತದೆ. ಬಹಳ ಹಿಂದೆಯೇ ಪಕ್ಷ ತೊರೆದು ಕಾಂಗ್ರೆಸ್ ಸೇರಬೇಕೆಂದಿದ್ದ 9 ಜೆಡಿಎಸ್ ಶಾಸಕರ ಪಟ್ಟಿಯಲ್ಲಿ ಶರಣಗೌಡ ಹೆಸರು ಕೂಡ ಇತ್ತು. ಆದರೆ ಅಧಿಕಾರದ ಆಪೇಕ್ಷೆ ಇಟ್ಟಿಕೊಳ್ಳದೆ ಬರೋದಾದ್ರೆ ಸ್ವಾಗತ ಅಂತ ಕಾಂಗ್ರೆಸ್ ವರಿಷ್ಠರು ಹೇಳಿದಾಗ ಇವರೆಲ್ಲ ಹಿಂದೆ ಸರಿದಿದ್ದರು. ಈಗ ಶರಣಗೌಡ ಸೇರಿದಂತೆ ಹಲವಾರು ಮಾಜಿ ಹಾಗೂ ಹಾಲಿ ಶಾಸಕರು ಬಿಜೆಪಿ ಜೊತೆ ಮೈತ್ರಿ (alliance with BJP) ಮಾಡಿಕೊಡಿರುವ ಬಗ್ಗೆ ಅಸಮಾಧಾನ ಅನ್ನೊದಕ್ಕಿಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಅಂತ ಹೇಳಿದರೆ ಹೆಚ್ಚು ಸೂಕ್ತ ಅನಿಸುತ್ತದೆ. ಯುವ ಜೆಡಿಎಸ್ ಶಾಸಕರನ್ನು ಸಮಾಧಾನಗೊಳಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಟಾಸ್ಕ್ ಅನ್ನು ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ನೀಡಿದ್ದಾರೆ. ಇವತ್ತು ಕಮಿಟಿ ಮೀಟಿಂಗ್ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಶರಣಗೌಡ ಜೊತೆ ನಿಖಿಲ್ ಮಾತುಕತೆ ನಡೆಸಿದ್ದಾರೆ. ನಂತರ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡಿದ ಶರಣಗೌಡ, ತಮ್ಮ ಅನಿಸಿಕೆ, ಸಲಹೆಗಳನ್ನು ನಿಖಿಲ್ ಗೆ ತಿಳಿಸಿದ್ದು ಅವರು ಅದನ್ನು ಕುಮಾರಸ್ವಾಮಿಯವರಿಗೆ ರವಾನಸಿದ್ದಾರೆ ಎಂದರು. ಅಂದರೆ ಮೈತ್ರಿಗೆ ನಿಮ್ಮ ಅನುಮೋದನೆ ಇದೆಯೇ ಅಂತ ಕೇಳಿದರೆ ಅವರಲ್ಲಿ ಸ್ಪಷ್ಟ ಉತ್ತರವಿರಲಿಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ