HD Deve Gowda: ಗೆಲ್ಲುವ ಅಭ್ಯರ್ಥಿಗಳಿಗೆ ಹೆಚ್​ಡಿ ದೇವೇಗೌಡರಿಂದ ಫೋನ್

HD Deve Gowda: ಗೆಲ್ಲುವ ಅಭ್ಯರ್ಥಿಗಳಿಗೆ ಹೆಚ್​ಡಿ ದೇವೇಗೌಡರಿಂದ ಫೋನ್

ಆಯೇಷಾ ಬಾನು
|

Updated on: May 12, 2023 | 3:14 PM

ಮನೆಯಲ್ಲಿ ಕೂತು ಹೆಚ್​.ಡಿ.ದೇವೇಗೌಡರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಬೇರೆ ಪಕ್ಷದವ್ರು ಜೆಡಿಎಸ್ ಅಭ್ಯರ್ಥಿ ಸಂಪರ್ಕಿಸುವ ಭೀತಿ ಹಿನ್ನೆಲೆ ಗೆಲ್ಲುವ ಅಭ್ಯರ್ಥಿಗಳಿಗೆ ಫೋನ್ ಕಾಲ್ ಮಾಡಿ ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್​, ಬಿಜೆಪಿ ಸರ್ಕಾರಗಳು ಸ್ವತಂತ್ರ ಸರ್ಕಾರದ ಲೆಕ್ಕಾಚಾರದಲ್ಲಿ ಮುಳುಗಿದ್ರೆ, ದಳಪತಿಗಳು ಮಾತ್ರ ಅತಂತ್ರ ಫಲಿತಾಂಶದ ಕನವರಿಕೆಯಲ್ಲಿದ್ದಾರೆ. ಈ ಬಾರಿಯೂ ಕುಮಾರಸ್ವಾಮಿಯೇ ಕಿಂಗ್ ಮೇಕರ್​, ಕುಮಾರಸ್ವಾಮಿ ನೇತೃತ್ವ ಇಲ್ಲದೆ ಸರ್ಕಾರವೇ ರಚನೆ ಆಗಲ್ಲ ಎಂದು ಮೀಸೆ ತಿರುವುತಿದ್ದು, ಹೊಸ ರಾಜಕೀಯ ಅಂಕ ಗಣಿತ ಪಠಿಸುತ್ತಿದ್ದಾರೆ. ಮತ ಎಣಿಕೆಗೆ ಕೆಲವೇ ಗಂಟೆಗಳು ಬಾಕಿ ಇದ್ದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಇದರ ನಡುವೆ ಮನೆಯಲ್ಲಿ ಕೂತು ಹೆಚ್​.ಡಿ.ದೇವೇಗೌಡರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಬೇರೆ ಪಕ್ಷದವ್ರು ಜೆಡಿಎಸ್ ಅಭ್ಯರ್ಥಿ ಸಂಪರ್ಕಿಸುವ ಭೀತಿ ಹಿನ್ನೆಲೆ ಗೆಲ್ಲುವ ಅಭ್ಯರ್ಥಿಗಳಿಗೆ ಫೋನ್ ಕಾಲ್ ಮಾಡಿ ಚರ್ಚೆ ನಡೆಸಿದ್ದಾರೆ. ಫಲಿತಾಂಶದ ಬಗ್ಗೆ ಮಾತುಕತೆ ನಡೆಸಿದ್ದಾರೆ. ತಮ್ಮ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಗೌಡರು ಕಸರತ್ತು ನಡೆಸುತ್ತಿದ್ದಾರೆ.