Karnataka Assembly Polls: ಪ್ರಜಾಪ್ರಭುತ್ವದ ಉತ್ಸವದಲ್ಲಿ ಶಾಂತಿಯುತವಾಗಿ ಪಾಲ್ಗೊಂಡು ಸಫಲಗೊಳಿಸಿದ ಎಲ್ಲ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದ ಸುರ್ಜೆವಾಲಾ

Karnataka Assembly Polls: ಪ್ರಜಾಪ್ರಭುತ್ವದ ಉತ್ಸವದಲ್ಲಿ ಶಾಂತಿಯುತವಾಗಿ ಪಾಲ್ಗೊಂಡು ಸಫಲಗೊಳಿಸಿದ ಎಲ್ಲ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದ ಸುರ್ಜೆವಾಲಾ

ಅರುಣ್​ ಕುಮಾರ್​ ಬೆಳ್ಳಿ
|

Updated on: May 12, 2023 | 3:54 PM

ಅಸಲಿಗೆ ಈ ಚುನಾವಣೆಯಲ್ಲಿ ಗೆದ್ದವರು ಆರೂವರೆ ಕನ್ನಡಿಗರು ಎಂದು ಸುರ್ಜೆವಾಲಾ ಹೇಳಿದರು.

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಬಗ್ಗೆ ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಅತೀವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಪ್ರಜಾಪ್ರಭುತ್ವದ ಉತ್ಸವದಲ್ಲಿ (Festival of Democracy) ಶಾಂತಿಯುತವಾಗಿ ಪಾಲ್ಗೊಂಡ 6.5 ಕೋಟಿ ಕನ್ನಡಗರಿಗೆ ಧನ್ಯವಾದ ಅರ್ಪಿಸಿದರು. ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷದೆಡೆ ವಿಶ್ವಾಸವನ್ನು ಪ್ರದರ್ಶಸಿದ್ದಾರೆ ಮತ್ತು ಪಕ್ಷ ಭರವಸೆ ನೀಡಿರುವ 5 ಭರವಸೆಗಳ ಬಗ್ಗೆ ಮೆಚ್ಚುಗೆ ಸೂಸಿದ್ದಾರೆ ಎಂದ ಅವರು ಹೇಳಿದರು. ಅಸಲಿಗೆ ಈ ಚುನಾವಣೆಯಲ್ಲಿ ಗೆದ್ದವರು ಆರೂವರೆ ಕನ್ನಡಿಗರ ಎಂದ ಸುರ್ಜೆವಾಲಾ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಸಂಗತಿಗಳನ್ನು ಕವರ್ ಮಾಡಿದ ಮಾಧ್ಯಮದವರಿಗೂ ಕೃತಜ್ಞತೆ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ