Karnataka Assembly Polls; ಕೆಲ ಸಂಪುಟ ಸಹೋದ್ಯೋಗಿಗಳೊಂದಿಗೆ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿದ ಸಿಎಂ ಬೊಮ್ಮಾಯಿ

Karnataka Assembly Polls; ಕೆಲ ಸಂಪುಟ ಸಹೋದ್ಯೋಗಿಗಳೊಂದಿಗೆ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿದ ಸಿಎಂ ಬೊಮ್ಮಾಯಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 12, 2023 | 2:25 PM

ಕೆಲ ಸಮೀಕ್ಷೆಗಳ ಪ್ರಕಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಸಾಧ್ಯತೆ ಇರುವುದರಿಂದ ಮೈತ್ರಿ ಸರ್ಕಾರದ ಸಂಭವನೀಯತೆ ತಲೆದೋರಿದೆ.

ಬೆಂಗಳೂರಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ನಮಗೆ ಲಭ್ಯವಿರುವ ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಮೊದಲಾದವರು ಸಭೆ ನಡೆಸುತ್ತಿದ್ದಾರೆ. ಅವರು ಜೆಡಿಎಸ್ ಧುರೀಣರ ಜೊತೆ ಮಾತುಕತೆ ನಡೆಸುತ್ತಿರುವ ಮಾಹಿತಿ ಕೂಡ ಇದೆ. ಏತನ್ಮಧ್ಯೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೆಲ ಸಚಿವರೊಂದಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (BS Yediyurappa) ಮನೆಗೆ ಭೇಟಿ ನೀಡಿ ಮಾತುಕತೆಯಲ್ಲಿ ತೊಡಗಿದರು. ಕೆಲ ಸಮೀಕ್ಷೆಗಳ ಪ್ರಕಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಸಾಧ್ಯತೆ ಇರುವುದರಿಂದ ಮೈತ್ರಿ ಸರ್ಕಾರದ (coalition government) ಸಂಭವನೀಯತೆ ತಲೆದೋರಿದೆ ಹಾಗಾಗೇ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ