Game Changer Constituencies: ಈ 40ಕ್ಷೇತ್ರಗಳ ಫಲಿತಾಂಶ ರಾಜ್ಯದ ಭವಿಷ್ಯವನ್ನು ನಿರ್ಧರಿಸುತ್ತವೆ
ಸಿವೋಟರ್ ಸಮೀಕ್ಷೆ ಪ್ರಕಾರ ಈ 40ಕ್ಕೂ ಹೆಚ್ಚು ಕ್ಷೇತ್ರಗಳು ಕರ್ನಾಟಕ ಚುನಾವಣಾ ಫಲಿತಾಂಶದ ದಿಕ್ಕನ್ನೇ ಬದಲಿಸುವ ನಿರ್ಣಾಯಕ ಕ್ಷೇತ್ರಗಳು. ಹಾಗಾದ್ರೆ, ಆ ಕ್ಷೇತ್ರಗಳು ಯಾವುದು ಅನ್ನೋದನ್ನ ಟಿವಿ9 ಇವತ್ತು ನಿಮ್ಮ ಮುಂದಿಡ್ತಿದೆ.
ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಭಾರೀ ಜಟಾಪಟಿ ನಡೆಯುತ್ತಿದೆ(Karnataka Assembly Elections 2023). ಕೆಲವೇ ಗಂಟೆಗಳಲ್ಲಿ ರಾಜಕೀಯ ನಾಯಕರ ಫಲಿತಾಂಶ ಹೊರ ಬೀಳಲಿದೆ. ಕರ್ನಾಟಕದ ಕಿರೀಟ ಯಾರ ಮುಡಿಗೆ ಅನ್ನೋದು ನಿರ್ಧಾರವಾಗುತ್ತೆ. ಆದ್ರೆ, ಈ ಬಾರಿಯ ರಿಸಲ್ಟ್ ಸಮೀಕ್ಷೆಗಳ ಅಂಕೆಗೆ ಸಿಗುತ್ತಿಲ್ಲ. ರಾಜಕೀಯ ಪಂಡಿತರ ಲೆಕ್ಕಕ್ಕೂ ಒಗ್ಗುತ್ತಿಲ್ಲ. ನಾಯಕರು ಹೇಳಿಕೊಂಡು ತಿರುಗುತ್ತಿರುವಂತೆ ಒಂದು ಕಡೆ ವಾಲುವ ಲಕ್ಷಣ ಕಾಣ್ತಿಲ್ಲ. ಯಾಕಂದ್ರೆ, ಈ ಬಾರಿಯ ಮಹಾಯುದ್ಧ ಅಷ್ಟರಮಟ್ಟಿಗೆ ಟಫ್ ಮತ್ತು ಟೈಟ್ ಫೈಟ್ ಏರ್ಪಟ್ಟಿದೆ. ಅದರಲ್ಲೂ 130, 140 ಅಂತಿರೋ ಕಾಂಗ್ರೆಸ್, ಬಿಜೆಪಿ ಲೆಕ್ಕಾಚಾರಗಳು ಅಡಕತ್ತರಿಯಲ್ಲಿ ಸಿಲುಕಿದೆ. ಈ ಪರಿಸ್ಥಿತಿಗೆ ಕಾರಣವಾಗಿರೋದೇ ರಾಜ್ಯದ 40ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗಿದೆ.
ಮೇಲ್ನೋಟಕ್ಕೆ ಸಿದ್ದರಾಮಯ್ಯ 130 ಅಂದ್ರೂ, ಡಿ.ಕೆ. ಶಿವಕುಮಾರ್ 140 ಅಂದ್ರೂ, ಬಿಎಸ್‌ವೈ 115 ಕ್ಷೇತ್ರ, ಶೋಭಾ 125 ಕ್ಷೇತ್ರ ಅಂತಾ ತಮ್ಮದೇ ಆದ ಬಹುಮತದ ಲೆಕ್ಕ ಕೊಡ್ತಿದ್ದಾರೆ. ಆದ್ರೆ, ನಾಯಕರ ಈ ಸಂಖ್ಯಾಶಾಸ್ತ್ರ ಅವರವರ ಲೆಕ್ಕಾಚಾರದ ಪ್ರಕಾರ ಸರಿಯೇ. ಯಾಕಂದ್ರೆ, 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಫಲಿತಾಂಶ ಏನು ಬೇಕಾದ್ರೂ ಬರಬಹುದು ಎನ್ನಲಾಗ್ತಿದೆ. ಸಿವೋಟರ್ ಸಮೀಕ್ಷೆ ಪ್ರಕಾರ ಈ 40ಕ್ಕೂ ಹೆಚ್ಚು ಕ್ಷೇತ್ರಗಳು ಕರ್ನಾಟಕ ಚುನಾವಣಾ ಫಲಿತಾಂಶದ ದಿಕ್ಕನ್ನೇ ಬದಲಿಸುವ ನಿರ್ಣಾಯಕ ಕ್ಷೇತ್ರಗಳು. ಹಾಗಾದ್ರೆ, ಆ ಕ್ಷೇತ್ರಗಳು ಯಾವುದು ಅನ್ನೋದನ್ನ ಟಿವಿ9 ಈ ವಿಡಿಯೋದಲ್ಲಿ ನಿಮ್ಮ ಮುಂದಿಡ್ತಿದೆ.