ರಾಜ್ಯದ ಬಿಜೆಪಿ ನಾಯಕರು ಬಿಎಸ್ ಯಡಿಯೂರಪ್ಪನವರ ಬಗ್ಗೆ ಅನ್ಯಮನಸ್ಕತೆ ಪ್ರದರ್ಶಿಸುತ್ತಿರುವುದು ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ!

Arun Kumar Belly

|

Updated on:Mar 18, 2023 | 6:30 PM

ಹುಳಿಯಾರು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸಚಿವ ಜೆಸಿ ಮಾಧುಸ್ವಾಮಿ ಮತ್ತು ಇತರ ನಾಯಕರು ಸತ್ಕರಿಸುವಾಗ ಯಡಿಯೂರಪ್ಪ ಹಿಂದಿನ ಸಾಲಿನಲ್ಲಿ ನಿಂತು ಮೂಕ ಪ್ರೇಕ್ಷಕನಂತೆ ವೀಕ್ಷಿಸುತ್ತಾರೆ.

ತುಮಕೂರು: ಸ್ಥಳೀಯ ಬಿಜೆಪಿ ನಾಯಕರಿಗೆ ಒಂದು ಮಹತ್ವದ ಸಂಗತಿ ಅರ್ಥವಾಗುತ್ತಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಬಿಟ್ಟರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬರುವಂತೆ ಮಾಡುವ ತಾಕತ್ತು ಕೇವಲ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಗಿದೆ. ಆದರೆ ರಾಜ್ಯದ ನಮ್ಮ ‘ಧೀಮಂತ’ ಸಣ್ಣಪುಟ್ಟ ನಾಯಕರು ದೆಹಲಿ ನಾಯಕರು ಬಂದಾಗ ಯಡಿಯೂರಪ್ಪನವರನ್ನು ಕಡೆಗಣಿಸಿ ಅದ್ಯಾವ ಪುರುಷಾರ್ಥ ಸಾಧಿಸುತ್ತಾರೋ? ಇಲ್ಲಿ ನೋಡಿ; ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಸಚಿವ ಜೆಸಿ ಮಾಧುಸ್ವಾಮಿ ಮತ್ತು ಇತರ ನಾಯಕರು ಸತ್ಕರಿಸುವಾಗ ಯಡಿಯೂರಪ್ಪ ಹಿಂದಿನ ಸಾಲಿನಲ್ಲಿ ನಿಂತು ಮೂಕ ಪ್ರೇಕ್ಷಕನಂತೆ ವೀಕ್ಷಿಸುತ್ತಾರೆ. ಅವರನ್ನು ಮುಂದೆ ಕರೆಯುವ ಪ್ರಯತ್ನ ಯಾರೂ ಮಾಡುವುದಿಲ್ಲ. ಅವರನ್ನು ಸ್ಪೆಂಟ್ ಫೋರ್ಸ್ ಅಂತ ಟ್ರೀಟ್ ಮಾಡಲಾಗುತ್ತಿದೆ. ಒಂದು ಮುಖ್ಯ ಪ್ರಶ್ನೆ, ಹುಳಿಯಾರು ಜನರ ಪೈಕಿ ಎಷ್ಟು ಜನಕ್ಕೆ ಜೆಪಿ ನಡ್ಡಾ ಗೊತ್ತು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada