Karnataka Assembly Polls 2023: ಖರ್ಗೆ ಅವರ ಮನೆಯಿಂದ ಹೊರಬಿದ್ದ ಡಿಕೆ ಸುರೇಶ್ ‘ಈಗ್ಲೂ ಕಪ್ ಅವರದ್ದೇ, ಮುಂದಕ್ಕೆ ನಮ್ಮದು,’ ಅಂದಿದ್ಯಾಕೆ?
ಆಮೇಲೆ ಸುರೇಶ್ ಮೈತ್ರಿಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಏನೇ ಪ್ರಶ್ನೆ ಕೇಳೋದಿದ್ರೆ ಸುರ್ಜೆವಾಲಾ ಅವರನ್ನು ಕೇಳಿ ಅನ್ನುತ್ತಾರೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಹೋದರ ಮತ್ತು ಸಂಸದ ಡಿಕೆ ಸುರೇಶ್ (DK Suresh) ಎದುರಾಳಿಗಳನ್ನು ಬೇಸ್ತು ಬೀಳಿಸುವುದರಲ್ಲಿ ನಿಷ್ಣಾತರು. ಅವರು ಕನಕಪುರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ಶಿವಕುಮಾರ್ ನಾಮಪತ್ರ ಅಂಗೀಕೃತವಾದ ಬಳಿಕ ತನ್ನದನ್ನು ಹಿಂಪಡೆದ ಸಂಗತಿ ನಿಮಗೆ ಗೊತ್ತಿದೆ. ಅದರ ಹಿಂದಿನ ಉದ್ದೇಶ ನಾವು ಈಗಾಗಲೇ ವಿವರಿಸಿದ್ದೇವೆ. ಇವತ್ತು ಕೂಡ ಅವರು ಒಗಟಿನಂಥ ಮಾತಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೊಂದಿಗೆ ಮಾತುಕತೆ ನಡೆಸಿ ಹೊರಬಂದ ಅವರನ್ನು ಪತ್ರಕರ್ತರು ಸಭೆಯಲ್ಲಿ ಏನು ಚರ್ಚೆಯಾಯಿತು ಅಂತ ಕೇಳಿದಾಗ, ‘ಕಪ್ ಈಗ್ಲೂ ಅವರದ್ದೇ, ಮುಂದಕ್ಕೆ ನಮ್ಮದು,’ ಅಂತ ಹೇಳುತ್ತಾರೆ. ಆಮೇಲೆ ಅವರು ಮೈತ್ರಿಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಏನೇ ಪ್ರಶ್ನೆ ಕೇಳೋದಿದ್ರೆ ಸುರ್ಜೆವಾಲಾ ಅವರನ್ನು ಕೇಳಿ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos