ಗುಂಡ್ಲುಪೇಟೆ ಪುರಸಭಾ ಸದಸ್ಯ ಚುನಾವಣಾ ಫಲಿತಾಂಶದ ಮೇಲೆ 1 ಕೋಟಿ ರೂ. ಬಾಜಿ ಕಟ್ಟಲು ಆಸಕ್ತರನ್ನು ಆಹ್ವಾನಿಸಿದರೆ ತಲುಪಿದ್ದು ಪೊಲೀಸ್!

ಗುಂಡ್ಲುಪೇಟೆ ಪುರಸಭಾ ಸದಸ್ಯ ಚುನಾವಣಾ ಫಲಿತಾಂಶದ ಮೇಲೆ 1 ಕೋಟಿ ರೂ. ಬಾಜಿ ಕಟ್ಟಲು ಆಸಕ್ತರನ್ನು ಆಹ್ವಾನಿಸಿದರೆ ತಲುಪಿದ್ದು ಪೊಲೀಸ್!

ಅರುಣ್​ ಕುಮಾರ್​ ಬೆಳ್ಳಿ
|

Updated on: May 12, 2023 | 6:47 PM

ಅದರೆ, ವಿಡಿಯೋ ನೋಡಿ ಅವರ ಮನೆಗೆ ತಲುಪಿದ್ದು ಸಮಾನಮನಸ್ಕ ಬೆಟ್ಟಿಂಗ್ ವೀರರಲ್ಲ, ಪೋಲಿಸರು! ಕಿರಣ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಚಾಮರಾಜನಗರ: ವಿಧಾನಸಭಾ ಚುನಾವಣಾ ಫಲಿತಾಂಶಗಳ ಮೇಲೆ ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಮತ್ತು ರಾಜಾರೋಷವಾಗಿ ಬೆಟ್ಟಿಂಗ್ (betting) ನಡೆಯುತ್ತಿರುವ ಸಂಗತಿ ನಿನ್ನೆ ವರದಿ ಮಾಡಿದ್ದೆವು, ಇವತ್ತು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪುರಸಭೆಯಲ್ಲಿ (Town Municipal Council) ಸದಸ್ಯನಾಗಿರುವ ಕಿರಣ್ (Kran) ಎನ್ನುವವರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿಎಸ್ ನಿರಂಜನಕುಮಾರ್ ಗೆಲ್ಲುತ್ತಾರೆ ಅಂತ ಒಂದು ಕೋಟಿ ರೂ. ಬಾಜಿ ಕಟ್ಟಲು ರೆಡಿಯಾಗಿ ಅಸಕ್ತರಿಗೆ ಬಂದು ಸಂಪರ್ಕಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಆಹ್ವಾನಿಸಿದ್ದಾರೆ. ಅದರೆ, ವಿಡಿಯೋ ನೋಡಿ ಅವರ ಮನೆಗೆ ತಲುಪಿದ್ದು ಸಮಾನಮನಸ್ಕ ಬೆಟ್ಟಿಂಗ್ ವೀರರಲ್ಲ, ಪೋಲಿಸರು! ಕಿರಣ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ