Karnataka Assembly Polls: ವರುಣಾದಲ್ಲಿ ಜೆಡಿಎಸ್​ಗೂ ವೋಟ್​ಬೇಸ್ ಇದೆ, ಇದುವರೆಗೆ ನಾವದನ್ನು ಟ್ಯಾಪ್ ಮಾಡಿರಲಿಲ್ಲ, ಅಷ್ಟೇ: ಹೆಚ್ ಡಿ ಕುಮಾರಸ್ವಾಮಿ

Karnataka Assembly Polls: ವರುಣಾದಲ್ಲಿ ಜೆಡಿಎಸ್​ಗೂ ವೋಟ್​ಬೇಸ್ ಇದೆ, ಇದುವರೆಗೆ ನಾವದನ್ನು ಟ್ಯಾಪ್ ಮಾಡಿರಲಿಲ್ಲ, ಅಷ್ಟೇ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 25, 2023 | 1:32 PM

ವರುಣಾ ಮತಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ಗೆಲ್ಲುವ ಬಗ್ಗೆ ಅತ್ಮವಿಶ್ವಾಸ ವ್ಯಕ್ತಪಡಿಸಲಿಲ್ಲ.

ಮೈಸೂರು: ಅಸ್ವಸ್ಥತೆಯಿಂದ ಬಳಲುತ್ತಿದ್ದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಚೇತರಿಸಿಕೊಂಡು ಪುನಃ ಪ್ರಚಾರಕ್ಕಿಳಿದಿದ್ದಾರೆ. ಮೈಸೂರಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಜಿಲ್ಲೆಯ ವರುಣಾ ಮತಕ್ಷೇತ್ರದ (Varuna constituency) ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ತಮ್ಮ ಅಭ್ಯರ್ಥಿ ಗೆಲ್ಲುವ ಬಗ್ಗೆ ಅತ್ಮವಿಶ್ವಾಸ ವ್ಯಕ್ತಪಡಿಸಲಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಗೂ ವೋಟ್ ಬೇಸ್ ಇದೆ, ಅದನ್ನೇ ಟ್ಯಾಪ್ ಮಾಡುವ ಪ್ರಯತ್ನ ಮಾಡುತ್ತೇವೆ ಅಂತ ಹೇಳಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದೇಗೌಡ (Siddegowda) ತಮ್ಮ ಹೆಸರನ್ನು ಕಾಂಗ್ರೆಸ್ ಪಕ್ಷಕ್ಕೆ ಕುಮಾರಸ್ವಾಮಿಯವರೇ ಸೂಚಿಸಿ ತಮಗೆ ಸಹಾಯ ಮಾಡುತ್ತೇನೆ ಎಂದಿದ್ದಾರೆ ಅಂತ ಹೇಳುತ್ತಿರುವುದನ್ನು ಕುಮಾರಸ್ವಾಮಿಯವರ ಗಮನಕ್ಕೆ ತಂದಾಗ, ನಾನ್ಯಾಕೆ ಸಿದ್ದೇಗೌಡರ ಹೆಸರು ಪ್ರಸ್ತಾಪ ಮಾಡಲಿ, ಅವರು ಸುಳ್ಳು ಹೇಳುತ್ತಿದ್ದಾರೆ ಅಂತ ದೇವಿಯ ಸನ್ನಿದಿಯಲ್ಲಿ ನಿಂತು ಹೇಳುತ್ತಿದ್ದೇನೆ, ದೇವಿಯೇ ನ್ಯಾಯ ತೀರಿಸುತ್ತಾಳೆ, ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 25, 2023 01:31 PM