Karnataka Assembly Polls: 37 ಸೀಟು ಗೆದ್ದ ಜೆಡಿಎಸ್ ಗೆ ನಾವು ಸಿಎಂ ಸ್ಥಾನ ನೀಡಿದರೆ ಆ ಗಿರಾಕಿ ಐಷಾರಾಮಿ ಹೋಟೆಲ್​ನಲ್ಲಿ ಮಜಾ ಮಾಡಿದ: ಸಿದ್ದರಾಮಯ್ಯ

Karnataka Assembly Polls: 37 ಸೀಟು ಗೆದ್ದ ಜೆಡಿಎಸ್ ಗೆ ನಾವು ಸಿಎಂ ಸ್ಥಾನ ನೀಡಿದರೆ ಆ ಗಿರಾಕಿ ಐಷಾರಾಮಿ ಹೋಟೆಲ್​ನಲ್ಲಿ ಮಜಾ ಮಾಡಿದ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2023 | 5:59 PM

ಅತಂತ್ರ ವಿಧಾನಸಭೆಯಂಥ ಸ್ಥಿತಿ ಏರ್ಪಟ್ಟರೆ ಯಾರೊಂದಿಗಾದರೂ ಕೈಜೋಡಿಸಿ ಸರ್ಕಾರ ರಚಿಸುವ ಹುನ್ನಾರ ಜೆಡಿಎಸ್ ಪಕ್ಷದ್ದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ತುಮಕೂರು: ಪಾವಗಡದ ಚಳ್ಳಕೆರೆ ಕ್ರಾಸ್ ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ (Venkatesh) ಪರ ಮಾತಾಡಿದ ಸಿದ್ದರಾಮಯ್ಯ (Siddaramaiah) ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಜೆಡಿಎಸ್ ಪಕ್ಷಕ್ಕೆ 25 ಕ್ಕಿಂತ ಹೆಚ್ಚಿನ ಸ್ಥಾನ ಸಿಗಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಗೌಡರ ಕುಟುಂಬ ಯಾವ ಪಕ್ಷಕ್ಕೂ ಬಹುಮತ ಸಿಗದಂತೆ ಹೋಮ ಹವನ ಮಾಡಿಸುತ್ತಿದೆ ಎಂದು ಹೇಳಿದರು. ಕುಮಾರಸ್ವಾಮಿಯ ಸ್ವಂತ ಬಲದಲ್ಲಿ ಯಾವತ್ತೂ ಅಧಿಕಾರಕ್ಕೆ ಬರಲಾರರು, ಹಾಗಾಗೇ, ಅತಂತ್ರ ವಿಧಾನಸಭೆಯಂಥ ಸ್ಥಿತಿ ಏರ್ಪಟ್ಟರೆ ಯಾರೊಂದಿಗಾದರೂ ಕೈಜೋಡಿಸಿ ಸರ್ಕಾರ ರಚಿಸುವ ಹುನ್ನಾರ ಜೆಡಿಎಸ್ ಪಕ್ಷದ್ದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಕಳೆದ ಬಾರಿ ಕಾಂಗ್ರೆಸ್ ಗೆ 80 ಸೀಟು ಸಿಕ್ಕು ಜೆಡಿಎಸ್ ಕೇವಲ 37 ಸೀಟು ಸಿಕ್ಕರೂ ಮುಖ್ಯಮಂತ್ರಿ ಸ್ಥಾನ ಅವರಿಗೆ ಬಿಟ್ಟುಕೊಡಲಾಗಿತ್ತು, ಆದರೆ ಆ ಗಿರಾಕಿ 14 ತಿಂಗಳು ಕಾಲ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮಜಾ ಮಾಡಿದ ಎಂದು ಸಿದ್ದರಾಮಯ್ಯ ನೇರವಾಗಿ ಏಕವಚನದಲ್ಲಿ ಜರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ