AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತವನ್ನು ಗೆಲ್ಲಿಸಿ ಅಳುತ್ತಲೇ ಮನದಾಳ ತೆರೆದಿಟ್ಟ ಜೆಮಿಮಾ ರೊಡ್ರಿಗಸ್; ವಿಡಿಯೋ

ಭಾರತವನ್ನು ಗೆಲ್ಲಿಸಿ ಅಳುತ್ತಲೇ ಮನದಾಳ ತೆರೆದಿಟ್ಟ ಜೆಮಿಮಾ ರೊಡ್ರಿಗಸ್; ವಿಡಿಯೋ

ಪೃಥ್ವಿಶಂಕರ
|

Updated on:Oct 31, 2025 | 2:54 PM

Share

Jemimah Rodrigues: ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಜೆಮಿಮಾ ರೊಡ್ರಿಗಸ್ ಶತಕ ಬಾರಿಸಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದರು. ಈ ಐತಿಹಾಸಿಕ ಗೆಲುವಿನ ನಂತರ ಜೆಮಿಮಾ ಭಾವುಕರಾಗಿ ಕಣ್ಣೀರಿಟ್ಟರು. ಕಠಿಣ ಸಮಯದ ನಂತರ ಬಂದ ಈ ಯಶಸ್ಸಿಗೆ ದೇವರು, ಕುಟುಂಬ ಮತ್ತು ತರಬೇತುದಾರರಿಗೆ ಕೃತಜ್ಞತೆ ಸಲ್ಲಿಸಿದರು. ಮೂರನೇ ಕ್ರಮಾಂಕದಲ್ಲಿ ಅನಿರೀಕ್ಷಿತ ಬ್ಯಾಟಿಂಗ್ ಮತ್ತು ತಂಡದ ಗೆಲುವಿಗೆ ಶತಕ ಸಮರ್ಪಿಸುವ ಬಗ್ಗೆ ಅವರು ಮಾತನಾಡಿದರು.

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದ ಜೆಮಿಮಾ ರೊಡ್ರಿಗಸ್ ಭಾವುಕರಾಗಿ ಕಣ್ಣೀರು ಹರಿಸಿದರು. ಜೆಮಿಮಾ ಅವರ ಶತಕದಿಂದಾಗಿ ಭಾರತವು ಆಸ್ಟ್ರೇಲಿಯಾವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿತು. ಸೆಮಿಫೈನಲ್‌ನಲ್ಲಿ ಶತಕ ಬಾರಿಸ ಅಜೇಯರಾಗಿ ಉಳಿದ ಜೆಮಿಮಾಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಆ ಬಳಿಕ ಮಾತನಾಡಿದ ಜೆಮಿಮಾ ಕಣ್ಣೀರಿಡುತ್ತಲೇ ತನ್ನ ಮನದಾಳವನ್ನು ಬಹಿರಂಗಪಡಿಸಿದರು.

ಪಂದ್ಯದ ನಂತರ ಮಾತನಾಡಿದ ಜೆಮಿಮಾ ‘ಮೊದಲನೆಯದಾಗಿ, ನಾನು ಯೇಸುವಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ತಾಯಿ, ನನ್ನ ತಂದೆ, ನನ್ನ ತರಬೇತುದಾರರು ಮತ್ತು ನನ್ನನ್ನು ನಂಬಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ ನಾಲ್ಕು ತಿಂಗಳುಗಳು ನಿಜವಾಗಿಯೂ ಕಷ್ಟಕರವಾಗಿತ್ತು, ಆದರೆ ಇದು ಇನ್ನೂ ಕನಸಿನಂತೆ ಭಾಸವಾಗುತ್ತಿದೆ.

ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬಗ್ಗೆ ಮಾತನಾಡದಿದ ಜೆಮಿಮಾ, ‘ನಾನು ನಿಜವಾಗಿಯೂ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆಂದು ನನಗೆ ತಿಳಿದಿರಲಿಲ್ಲ. ನಾನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಆದರೆ ನಾನು ಸ್ನಾನಕ್ಕೆ ಹೋಗುವ ಮೊದಲು ಏನಾದರೂ ಬದಲಾವಣೆಗಳಿದ್ದರೆ ನನಗೆ ತಿಳಿಸಲು ಹೇಳಿದ್ದೆ. ಅದರಂತೆ ನಾನು ಮೈದಾನಕ್ಕೆ ಇಳಿಯುವ ಐದು ನಿಮಿಷಗಳ ಮೊದಲು, ನಾನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎಂದು ನನಗೆ ಹೇಳಲಾಯಿತು ಎಂದಿದ್ದಾರೆ.

ತನ್ನ ಶತಕದ ಬಗ್ಗೆ ಮಾತನಾಡಿದ ಜೆಮಿಮಾ, ‘ಇಂದು ನನ್ನ ಅರ್ಧಶತಕ ಅಥವಾ ಶತಕವನ್ನು ಆಚರಿಸುವ ದಿನವಲ್ಲ, ಬದಲಾಗಿ ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವ ದಿನವಾಗಿತ್ತು. ನನಗೆ ಕೆಲವು ಅವಕಾಶಗಳು ಸಿಕ್ಕಿವೆ ಎಂದು ನನಗೆ ತಿಳಿದಿದೆ, ಆದರೆ ದೇವರು ನನಗೆ ಎಲ್ಲವನ್ನೂ ಸರಿಯಾದ ಸಮಯದಲ್ಲಿ ನೀಡಿದ್ದಾನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 31, 2025 02:53 PM