Opposition Leaders Meet: ಸೀಟು ಹುಡುಕಾಡುತ್ತಿದ್ದ ಸಿದ್ದರಾಮಯ್ಯರಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮದನ್ನು ಕೊಡಲು ಮುಂದಾದರು!

ಅರುಣ್​ ಕುಮಾರ್​ ಬೆಳ್ಳಿ

Updated on: Jul 18, 2023 | 6:54 PM

ಆದರೆ, ಸಿದ್ದರಾಮಯ್ಯ ಹೇಮಂತ್ ಭುಜ ತಟ್ಟಿ ಕೂತ್ಕೊಳ್ಳಿ ಅಂತ ಹೇಳಿ ಅವರ ಪಕ್ಕದ ಸೀಟಲ್ಲಿ ಆಸೀನರಾಗುತ್ತಾರೆ.

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿ, ವಿರೋಧ ಪಕ್ಷದ ನಾಯಕನಾಗಿರಲಿ ಅಥವಾ ಕೇವಲ ಒಬ್ಬ ಶಾಸಕನಾಗಿರಲಿ, ನೀರು ತನ್ನ ಮಟ್ಟವನ್ನು ಕಾಯ್ದುಕೊಳ್ಳುವ ಹಾಗೆ ತಮ್ಮ ಗತ್ತನ್ನು ಕಾಯ್ದುಕೊಳ್ಳುತ್ತಾರೆ. 26 ವಿರೋಧ ಪಕ್ಷಗಳ ನಾಯಕರು ಇಂದು ಬೆಂಗಳೂರಲ್ಲಿ ನಡೆಸಿದ ಸಭೆಯ ವೇದಿಕೆಗೆ ಅವರು ತಮ್ಮ ಎಂದಿನ ಗತ್ತಿನಲ್ಲೇ ಆಗಮಿಸಿದರು. ಆದರೆ ಕೂರಲು ಅವರಿಗೆ ತಕ್ಷಣಕ್ಕೆ ಆಸನ ಸಿಗೋದಿಲ್ಲ. ಅಯೋಜಕರು ಮೊದಲ ಸಾಲಿನ ಕೊನೆಯಲ್ಲಿ ಸೀಟು ಇರುವುದನ್ನು ತೋರಿಸಿದಾಗ ಮುಖ್ಯಮಂತ್ರಿ ನಿಧಾನಕ್ಕೆ ನಡೆಯುತ್ತಾ ಅಲ್ಲಿಗೆ ಹೋಗುತ್ತಾರೆ. ವೇದಿಕೆ ಮೇಲಿದ್ದ ಇತರ ನಾಯಕರು ತಮ್ಮ ತಮ್ಮ ಮಾತುಗಳಲ್ಲಿ ಬ್ಯೂಸಿಯಾಗಿರುತ್ತಾರೆ. ಆದರೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಸಿದ್ದರಾಮಯ್ಯರನ್ನು ಕಂಡಾಕ್ಷಣ ಎದ್ದು ನಿಂತು ತಮ್ಮ ಸೀಟು ಬಿಟ್ಟುಕೊಡಲು ಮುಂದಾಗುತ್ತಾರೆ. ಆದರೆ, ಸಿದ್ದರಾಮಯ್ಯ ಹೇಮಂತ್ ಭುಜ ತಟ್ಟಿ ಕೂತ್ಕೊಳ್ಳಿ ಅಂತ ಹೇಳಿ ಅವರ ಪಕ್ಕದ ಸೀಟಲ್ಲಿ ಆಸೀನರಾಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.