Jio Fancode OTT: ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತೊಂದು ವಿಶೇಷ ಕೊಡುಗೆ

|

Updated on: May 22, 2024 | 7:55 AM

ಜಿಯೋಏರ್ ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ ಪ್ರೀಪ್ರೇಯ್ಡ್ ಗ್ರಾಹಕರಿಗೆ ಫ್ಯಾನ್ ಕೋಡ್ ಎಂಬ ಪ್ರೀಮಿಯಂ ಕ್ರೀಡಾ ಒಟಿಟಿ ಅಪ್ಲಿಕೇಷನ್​ಗೆ ಕಾಂಪ್ಲಿಮೆಂಟರಿ ಸಬ್​ಸ್ಕ್ರಿಪ್ಷನ್ ನೀಡುತ್ತಿದೆ. ಜಿಯೋ ಏರ್ ಫೈಬರ್ ಮತ್ತು ಜಿಯೋಫೈಬರ್ ಗ್ರಾಹಕರು ₹1199 ಮತ್ತು ಮೇಲ್ಪಟ್ಟ ಪ್ಲಾನ್​ಗೆ ಸಬ್​ಸ್ಕ್ರಿಪ್ಷನ್ ಪಡೆದಾಗ ಕಾಂಪ್ಲಿಮೆಂಟರಿ ಆಗಿ ಫ್ಯಾನ್ ಕೋಡ್ ಒಟಿಟಿಗೆ ಪ್ರವೇಶ ದೊರೆಯುತ್ತದೆ.

ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತೊಂದು ವಿಶೇಷ ಕೊಡುಗೆಯನ್ನು ಪರಿಚಯಿಸುತ್ತಿದೆ. ಜಿಯೋಏರ್ ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ ಪ್ರೀಪ್ರೇಯ್ಡ್ ಗ್ರಾಹಕರಿಗೆ ಫ್ಯಾನ್ ಕೋಡ್ ಎಂಬ ಪ್ರೀಮಿಯಂ ಕ್ರೀಡಾ ಒಟಿಟಿ ಅಪ್ಲಿಕೇಷನ್​ಗೆ ಕಾಂಪ್ಲಿಮೆಂಟರಿ ಸಬ್​ಸ್ಕ್ರಿಪ್ಷನ್ ನೀಡುತ್ತಿದೆ. ಜಿಯೋ ಏರ್ ಫೈಬರ್ ಮತ್ತು ಜಿಯೋಫೈಬರ್ ಗ್ರಾಹಕರು ₹1199 ಮತ್ತು ಮೇಲ್ಪಟ್ಟ ಪ್ಲಾನ್​ಗೆ ಸಬ್​ಸ್ಕ್ರಿಪ್ಷನ್ ಪಡೆದಾಗ ಕಾಂಪ್ಲಿಮೆಂಟರಿ ಆಗಿ ಫ್ಯಾನ್ ಕೋಡ್ ಒಟಿಟಿಗೆ ಪ್ರವೇಶ ದೊರೆಯುತ್ತದೆ. ಅಲ್ಲದೆ ಜಿಯೋ ಮೊಬಿಲಿಟಿ ಪ್ರಿಪೇಯ್ಡ್ ಗ್ರಾಹಕರು ತಮ್ಮ ಈಗಿರುವ ₹398, ₹1198, ₹4498 ಪ್ಲ್ಯಾನ್‌ ಮೂಲಕ ಅಥವಾ ಹೊಚ್ಚ ಹೊಸದಾದ ₹3333 ವಾರ್ಷಿಕ ಪ್ಲ್ಯಾನ್ ಬಳಸುತ್ತಿದ್ದಲ್ಲಿ ಈ ಕಾಂಪ್ಲಿಮೆಂಟರಿ ಫ್ಯಾನ್ ಕೋಡ್ ಪಡೆಯಬಹುದು. ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಈ ಕಾಂಪ್ಲಿಮೆಂಟರಿ ಯೋಜನೆ ದೊರೆಯಲಿದೆ. ಹೊಸ ಹಾಗೂ ಈಗಾಗಲೇ ಜಿಯೋ ಗ್ರಾಹಕರಾಗಿರುವವರಿಗೆ ಈ ಪ್ಲ್ಯಾನ್ ದೊರೆಯುತ್ತದೆ.