ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರ ಪ್ರಚಾರ ಕಾರ್ಯಕ್ರಮದಲ್ಲಿ ರೇವಣ್ಣ-ಕುಮಾರಸ್ವಾಮಿ ನಡುವೆ ಗಹನ ಚರ್ಚೆ!
ಕೆಲ ದಿನಗಳನ್ನು ಜೈಲಿನಲ್ಲಿ ಕಳೆದ ವಿಚಾರ ರೇವಣ್ಣರ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಅಶ್ವಥ್ ನಾರಾಯಣ ಅವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಭಾಷಣದಲ್ಲಿ ಹೇಳುತ್ತಿದ್ದರೆ ರೇವಣ್ಣ ತಮ್ಮ ಕಿರಿಯ ಸಹೋದರನೊಂದಿಗೆ ಲೋಕಾಭಿರಾಮವಾಗಿ ಮಾತಾಡುತ್ತಿದ್ದರು.
ಮೈಸೂರು: ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮರಿತಿಬ್ಬೇಗೌಡ (Maritibbegowda) ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಕೆ ವಿವೇಕಾನಂದ (K Vivekananda) ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಇವತ್ತು ಮೈಸೂರು ನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪ್ರಮುಖ ನಾಯಕರು ವಿವೇಕಾನಂದ ಪ್ರಚಾರ ಮಾಡಿದರು. ದೃಶ್ಯಗಳಲ್ಲಿ ನಿಮಗೆ ಕಾಣುವ ಹಾಗೆ, ವೇದಿಕೆ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna), ಮತ್ತೊಬ್ಬ ಶಾಸಕ ಜಿಟಿ ದೇವೇಗೌಡ ಆಸೀನರಾಗಿದ್ದರೆ, ಮಾಜಿ ಉನ್ನತ ಶಿಕ್ಷಣ ಸಚಿವ ಮತ್ತು ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಭಾಷಣ ಮಾಡುತ್ತಿದ್ದಾರೆ. ಮನೆ ಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಕೋರ್ಟ್ ನಿಂದ ಜಾಮೀನು ಪಡೆದಿರುವ ರೇವಣ್ಣ ನಿನ್ನೆಯಿಂದಲೇ ತಮ್ಮನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ದಿನಗಳನ್ನು ಜೈಲಿನಲ್ಲಿ ಕಳೆದ ವಿಚಾರ ರೇವಣ್ಣರ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಅಶ್ವಥ್ ನಾರಾಯಣ ಅವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಭಾಷಣದಲ್ಲಿ ಹೇಳುತ್ತಿದ್ದರೆ ರೇವಣ್ಣ ತಮ್ಮ ಕಿರಿಯ ಸಹೋದರನೊಂದಿಗೆ ಲೋಕಾಭಿರಾಮವಾಗಿ ಮಾತಾಡುತ್ತಿದ್ದರು. ರೇವಣ್ಣಗೆ ಜಾಮಿನು ಸಿಕ್ಕಿದ್ದು ಕುಮಾರಸ್ವಾಮಿಯವರನ್ನೂ ಕೊಂಚ ನಿರಾಳವಾಗಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಶಾಸಕರೊಬ್ಬರ ಚಿತಾವಣೆಯಿಂದ ಹೆಚ್ ಡಿ ರೇವಣ್ಣರನ್ನು ಬಂಧಿಸಲಾಗಿದೆ: ಕೆಎಸ್ ಲಿಂಗೇಶ್, ಮಾಜಿ ಶಾಸಕ