ಕಾಂಗ್ರೆಸ್ ಶಾಸಕರೊಬ್ಬರ ಚಿತಾವಣೆಯಿಂದ ಹೆಚ್ ಡಿ ರೇವಣ್ಣರನ್ನು ಬಂಧಿಸಲಾಗಿದೆ: ಕೆಎಸ್ ಲಿಂಗೇಶ್, ಮಾಜಿ ಶಾಸಕ
ಅದರೆ, ಅಧಿಕಾರಿಗಳು ಯಾವುದೇ ತಪ್ಪನ್ನು ಮಾಡದ ಮತ್ತು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿರುವ ಹೆಚ್ ಡಿ ರೇವಣ್ಣರನ್ನು ವಿನಾಕಾರಣ ಬಂಧಿಸಿದೆ ಎಂದು ಲಿಂಗೇಶ್ ಹೇಳಿದರು. ಕೆ ಆರ್ ನಗರದ ಶಾಸಕರ ಚಿತಾವಣೆ ಮೇರೆಗೆ ರೇವಣ್ಣರನ್ನು ಹಣಿಯಲು ಬಂಧಿಸಲಾಗಿದೆ ಎಂದು ಮಾಜಿ ಶಾಸಕ ಹೇಳಿದರು. ರೇವಣ್ಣ ತಮ್ಮ ತಂದೆ-ತಾಯಿ ಅರೋಗ್ಯ ವಿಚಾರಿಸಲು ದೇವೇಗೌಡರ ಮನೆಗೆ ಹೋಗಿದ್ದರೇ ಹೊರತು ಅವರ ಮನೆಯಲ್ಲಿ ಅವಿತು ಕೂತಿರಲಿಲ್ಲ ಎಂದು ಲಿಂಗೇಶ್ ಹೇಳಿದರು.
ಹಾಸನ: ನಗರದ ಪ್ರೆಸ್ ಕ್ಲಬ್ ನಲ್ಲಿಂದು ಸ್ಥಳೀಯ ಜೆಎಡಿಎಸ್ ನಾಯಕರು ಮಾಜಿ ಶಾಸಕ ಕೆಎಸ್ ಲಿಂಗೇಶ್ (KS Lingesh) ಅವರ ನೇತೃತ್ವದಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದರು. ನಿನ್ನೆ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ತಿಳಿಸಲು ಪತ್ರಿಕಾ ಗೋಷ್ಟಿ ಕರೆಯಲಾಗಿದೆ ಎಂದು ಹೇಳಿದ ಲಿಂಗೇಶ್, ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳ (Prajwal Revanna sex tapes) ಪ್ರಕರಣದಲ್ಲಿ ಸರ್ಕಾರ ಎಸ್ಐಟಿ ರಚಿಸಿರುವುದನ್ನು ಕೋರ್ ಕಮಿಟಿ (JDS core committee) ಸ್ವಾಗತಿಸಿದೆ ಆದರೆ ಅದು ತನಿಖೆಯಲ್ಲಿ ದಿಕ್ಕು ತಪ್ಪುತ್ತಿದೆಯಾ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದರು. ಟೇಪುಗಳು ಹೊರಬಿದ್ದ ಬಳಿಕ ಅವಮಾನದಿಂದ ಕಂಗಟ್ಟಿರುವ ಮಹಿಳೆಯರಿಗೆ ನೆರವು ಒದಗಿಸುವ ಕೆಲಸವನ್ನು ಎಸ್ಐಟಿ ಮಾಡಬೇಕಿತ್ತು. ಅದರೆ, ಅಧಿಕಾರಿಗಳು ಯಾವುದೇ ತಪ್ಪನ್ನು ಮಾಡದ ಮತ್ತು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿರುವ ಹೆಚ್ ಡಿ ರೇವಣ್ಣರನ್ನು ವಿನಾಕಾರಣ ಬಂಧಿಸಿದೆ ಎಂದು ಲಿಂಗೇಶ್ ಹೇಳಿದರು. ಕೆ ಆರ್ ನಗರದ ಶಾಸಕರ ಚಿತಾವಣೆ ಮೇರೆಗೆ ರೇವಣ್ಣರನ್ನು ಹಣಿಯಲು ಬಂಧಿಸಲಾಗಿದೆ ಎಂದು ಮಾಜಿ ಶಾಸಕ ಹೇಳಿದರು. ರೇವಣ್ಣ ತಮ್ಮ ತಂದೆ-ತಾಯಿ ಅರೋಗ್ಯ ವಿಚಾರಿಸಲು ದೇವೇಗೌಡರ ಮನೆಗೆ ಹೋಗಿದ್ದರೇ ಹೊರತು ಅವರ ಮನೆಯಲ್ಲಿ ಅವಿತು ಕೂತಿರಲಿಲ್ಲ ಎಂದು ಲಿಂಗೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತೆ ಎಂದ ಮಲ್ಲಿಕಾರ್ಜುನ ಖರ್ಗೆ