Jio Postpaid Offer: ಜಿಯೋಫೈಬರ್ ಗ್ರಾಹಕರಿಗೆ ಪೋಸ್ಟ್ ಪೇಯ್ಡ್ ಪ್ಲಾನ್ 888 ಜತೆಗೆ 15 OTT ಉಚಿತ
ಹೊಸ ಪೋಸ್ಟ್ ಪೇಯ್ಡ್ ಆಫರ್ ಪ್ಲ್ಯಾನ್ ಪರಿಚಯಿಸಲಾಗಿದೆ. ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹಕರಿಗೆ ಈ ಪ್ಲ್ಯಾನ್ ಆಫರ್ ಲಭ್ಯವಿದ್ದು, 30 ಎಂಬಿಪಿಎಸ್ ವೇಗ ಅನ್ಲಿಮಿಟೆಡ್ ಇಂಟರ್ನೆಟ್ ದೊರೆಯಲಿದೆ.
ರಿಲಯನ್ಸ್ ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹರಿಗಾಗಿ ಹೊಸ ಪೋಸ್ಟ್ ಪೇಯ್ಡ್ ಆಫರ್ ಪ್ಲ್ಯಾನ್ ಪರಿಚಯಿಸಲಾಗಿದೆ. ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹಕರಿಗೆ ಈ ಪ್ಲ್ಯಾನ್ ಆಫರ್ ಲಭ್ಯವಿದ್ದು, 30 ಎಂಬಿಪಿಎಸ್ ವೇಗ ಅನ್ಲಿಮಿಟೆಡ್ ಇಂಟರ್ನೆಟ್ ದೊರೆಯಲಿದೆ. ಜಿಯೋ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ 888 ಪರಿಚಯಿಸಲಾಗಿದ್ದು, ಅದರಲ್ಲಿ ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರೀಮಿಯಂ ಸಹಿತ 15ಕ್ಕೂ ಹೆಚ್ಚಿನ ಒಟಿಟಿ ಅಪ್ಲಿಕೇಶನ್ ಲಭ್ಯವಾಗಲಿದೆ. ₹888 ಪೋಸ್ಟ್‌ಪೇಯ್ಡ್ ಯೋಜನೆ ಪ್ರತಿಯೊಬ್ಬರಿಗೂ ದೊರೆಯಲಿದ್ದು, ಪ್ರಿಪೇಯ್ಡ್ ಯೋಜನೆ ಹೊಂದಿರುವ ಗ್ರಾಹಕರು ಈ ಹೊಸ ಪೋಸ್ಟ್ ಪೇಯ್ಡ್ ಯೋಜನೆಗೆ ಅಪ್ಗ್ರೇಡ್ ಮಾಡಬಹುದು.
Latest Videos