Jio Price Hike: ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ ಏರಿಕೆ |

Jio Price Hike: ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ ಏರಿಕೆ |

ಕಿರಣ್​ ಐಜಿ
|

Updated on: Jul 01, 2024 | 12:42 PM

ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ತನ್ನ ಎಲ್ಲಾ ರಿಚಾರ್ಜ್‌ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದೆ. ಹೊಸ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

5G ಪ್ಲ್ಯಾನ್​ಗಳನ್ನು ಕಡಿಮೆ ದರಕ್ಕೆ ಪರಿಚಯಿಸುವ ಮೂಲಕ ಸುದ್ದಿಯಾಗಿದ್ದ ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ತನ್ನ ಎಲ್ಲಾ ರಿಚಾರ್ಜ್‌ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದೆ. ಹೊಸ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಈ ಹಿಂದೆ ₹155 ಇದ್ದ ರಿಚಾರ್ಜ್‌ ಪ್ಲ್ಯಾನ್‌ ಜುಲೈ 3 ರಿಂದ ₹189ಕ್ಕೆ ಏರಲಿದೆ. ಇದರಲ್ಲಿ ಶೇ. 22ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಗರಿಷ್ಠ ಪ್ರಮಾಣದ ಮೊಬೈಲ್‌ ಗ್ರಾಹಕರನ್ನು ಹೊಂದಿರುವ ಜಿಯೋ ಈಗಿರುವ 19 ಪ್ಲ್ಯಾನ್‌ಗಳಿಗೆ ಬೆಲೆ ಏರಿಕೆ ಮಾಡಿದೆ. ಇದರಲ್ಲಿ 17 ಪ್ರೀಪೇಡ್‌ ಪ್ಲ್ಯಾನ್‌ಗಳಾಗಿದ್ದು, ಎರಡು ಪೋಸ್ಟ್‌ಪೇಯ್ಡ್​ ಪ್ಲ್ಯಾನ್‌ಗಳಾಗಿವೆ. ಯಾವೆಲ್ಲಾ ಪ್ಲ್ಯಾನ್‌ಗಳ ಬೆಲೆ ಎಷ್ಟು ಏರಿಕೆ ಮಾಡಲಾಗಿದೆ ಎನ್ನುವ ವಿವರ ವಿಡಿಯೊದಲ್ಲಿದೆ.