AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷ

ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷ

ಸುರೇಶ ನಾಯಕ
| Updated By: ವಿವೇಕ ಬಿರಾದಾರ

Updated on: Jul 01, 2024 | 1:05 PM

ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಿದ್ದ ಮಗುವನ್ನು ಹೊರ ತೆಗೆದು ಗಿಡಕ್ಕೆ ಕಟ್ಟಿದ್ದ ಜೋಳಿಗೆಯಲ್ಲಿ ಮಲಗಿಸಿರುವ ಘಟನೆ ನಡೆದಿದೆ. ಮಾಟಮಂತ್ರ ಮಾಡುವವರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬೀದರ್, ಜುಲೈ 01: ಬಸವಕಲ್ಯಾಣ (Basava Kalyana) ತಾಲೂಕಿನ ಮಂಠಾಳ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಂತ್ಯಸಂಸ್ಕಾರ ಮಾಡಿದ್ದ ಮಗು (Child) ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷವಾಗಿದೆ. ಹೌದು, ವಿಚಿತ್ರವೆನಿಸಿದರೂ ಸತ್ಯ. ಮಂಠಾಳ ಗ್ರಾಮದ ಅಂಬಯ್ಯ ಸ್ವಾಮಿ ಎಂಬುವರ ಒಂದೂವರೆ ವರ್ಷದ ಮಗು ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟಿತ್ತು. ಶನಿವಾರ (ಜೂ.29) ರಂದು ಅಂತ್ಯಕ್ರಿಯೆ ನೆರವೇರಿದೆ. ಮರುದಿನ ರವಿವಾರ (ಜೂ.29) ರಂದು ಬೆಳಗ್ಗೆ ಸಮಾಧಿ ಬಳಿ ಸಂಬಂಧಿಕರು ಬಂದು ನೋಡಿದಾಗ, ಯಾರೋ ಸಮಾಧಿ ಅಗೆದು ಮಗುವರನ್ನು ಹೊರ ತೆಗೆದು, ಒಂದು ಕಪ್ಪು ಬಟ್ಟೆಯನ್ನು ಜೋಳಿಗೆ ರೀತಿ ಗಿಡಕ್ಕೆ ಕಟ್ಟಿ ಮಗುವನ್ನು ಅದರಲ್ಲಿ ಹಾಕಲಾಗಿತ್ತು. ಬಳಿಕ ಗ್ರಾಮಸ್ಥರು ಮಗವನ್ನು ಮತ್ತೆ ಅದೆ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿದರು.

ಈ ಕೃತ್ಯವನ್ನು ಕಂಡ ಗ್ರಾಮಸ್ಥರು ಮತ್ತು ಪೋಷಕರ ಆತಂಕಗೊಂಡಿದ್ದಾರೆ. ಮಾಟಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ರೀತಿಯಾಗಿ ಅನೇಕ ಘಟನೆಗಳು ನಡೆದಿದ್ದವು. ಶವಗಳನ್ನು ಸಮಾಧಿಯಿಂದ ಹೊರ ತೆಗೆದು ಪೂಜೆ ಮಾಡಿ, ಶವವನ್ನು ಹಾಗೆ ಬಿಟ್ಟು ಹೋಗಲಾಗಿತ್ತು.

ಇದನ್ನೂ ಓದಿ: ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ಐವರು! ಇಲ್ಲಿದೆ ವಿಡಿಯೋ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ