ಜಿಯೋ ನೆಕ್ಸ್ಟ್ ಸ್ಮಾರ್ಟ್ ಫೋನ್ ಲಾಂಚ್ ಇನ್ನೂ ದೂರ; ಫೋನಿನ ಬೆಲೆ ಗ್ರಾಹಕರಿಗೆ ಅನಿಸಲಿದೆ ಭಾರ! 

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 17, 2021 | 7:21 PM

ಮತ್ತೊಂದು ನಿರಾಶಾದಾಯಕ ಸಂಗತಿ ಏನು ಗೊತ್ತಾ? ಮುಕೇಶ್ ಮೊದಲು ಹೇಳಿದ ಹಾಗೆ ಜಿಯೋ ನೆಕ್ಸ್ಟ್ ಸ್ಮಾರ್ಟ್ ಫೋನ್ ರೂ. 3,500-4,000 ಬೆಲೆಗೆ ಮಾರಾಟವಾಗಲ್ಲ. ಅದು ರೂ. 5,000 ಗಳವರೆಗೆ ಹೋಗುವ ಚಾನ್ಸ್ ಇದೆಯಂತೆ.

ಮೊದಲು ಗಣೇಶನ ಹಬ್ಬಕ್ಕೆ ಹೊಸ ಪೋನ್ ಸ್ಮಾರ್ಟ್ ಪೋನ್ ಲಾಂಚ್ ಮಾಡ್ತೀನಿ ಅಂತ ಹೇಳಿದ್ದರು. ಪೋನಿನ ಬೆಲೆ ರೂ. 4000 ಕ್ಕಿಂತ ಹೆಚ್ಚಿರಲಾರದು ಅಂತ ಹೇಳಿದ್ದರು. ಕೇವಲ ರೂ 500 ಮುಂಗಡ ಹಣ ನೀಡಿ ಉಳಿದದನ್ನು ಸುಲಭ ಮಾಸಿಕ ಕಂತುಗಳಲ್ಲಿ ಕಟ್ಟಬಹುದು ಅಂತಲೂ ಹೇಳಿದ್ದರು. ಅದರೆ ಈಗ ಏಷ್ಯಾದ ಆಗರ್ಭ ಶ್ರೀಮಂತ ಮತ್ತು ಜಿಯೋ ಟೆಲಿಕಮ್ಯುನಿಕೇಶನ್ಸ್ ಸಂಸ್ಥೆಯ ಮಾಲೀಕ ಮುಕೇಶ್ ಅಂಬಾನಿ ಉಲ್ಟಾ ಹೊಡೆಯುತ್ತಿದ್ದಾರೆ ಮಾರಾಯ್ರೇ. ವಿಷಯ ಏನು ಅಂತ ನಿಮಗೂ ಗೊತ್ತುಂಟು. ಮುಕೇಶ್ ಅವರು ಸೆಪ್ಟೆಂಬರ್ 10 ಅಂದರೆ ವಿನಾಯಕ ಚತುರ್ಥಿಯಂದು ತನ್ನ ಹೊಸ ಜಿಯೋ ನೆಕ್ಸ್ಟ್ ಸ್ಮಾರ್ಟ್ ಫೋನ್ ಲಾಂಚ್ ಮಾಡುವುದಾಗಿ ಹೇಳಿದ್ದರು. ರಿಲಯನ್ಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನೂ ತೆಗೆದುಕೊಂಡಾಗಿತ್ತು.

ಆದರೆ ಗಣೇಶನ ಹಬ್ಬ ಮುಗಿದು ಒಂದು ವಾರವಾಯಿತು. ಜಿಯೋ ಸ್ಮಾರ್ಟ್ ಫೋನ್ ಮಾತ್ರ ಇನ್ನೂ ಲಾಂಚ್ ಆಗಲಿಲ್ಲ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ದೀಪಾವಳಿ ಹಬ್ಬಕ್ಕೆ ಅದನ್ನು ಮಾರ್ಕೆಟ್​ಗೆ ಬಿಡುಗಡೆ ಮಾಡುವ ಪ್ಲ್ಯಾನ್ ಮುಕೇಶ್ ಅವರಿಗಿದೆಯಂತೆ.

ಮತ್ತೊಂದು ನಿರಾಶಾದಾಯಕ ಸಂಗತಿ ಏನು ಗೊತ್ತಾ? ಮುಕೇಶ್ ಮೊದಲು ಹೇಳಿದ ಹಾಗೆ ಜಿಯೋ ನೆಕ್ಸ್ಟ್ ಸ್ಮಾರ್ಟ್ ಫೋನ್ ರೂ. 3,500-4,000 ಬೆಲೆಗೆ ಮಾರಾಟವಾಗಲ್ಲ. ಅದು ರೂ. 5,000 ಗಳವರೆಗೆ ಹೋಗುವ ಚಾನ್ಸ್ ಇದೆಯಂತೆ. ಶಾಮಿ, ಸ್ಯಾಮ್ಸಂಗ್, ರೀಯಲ್ಮೀ ಮೊದಲಾದ ಪೋನ್​ಗಳ ಹಾಗೆ ಎಲ್ಲ ಅಡ್ವಾನ್ಸ್ಡ ಫೀಚರ್​ಗಳು ಜಿಯೋ ನೆಕ್ಸ್ಟ್ ಸ್ಮಾರ್ಟ್ ಫೋನ್ ನಲ್ಲಿದ್ದರೆ, ಗ್ರಾಹಕರು ರೂ. 5,000 ತೆರಲು ಹೆಚ್ಚು ಯೋಚಿಸಲಾರರು.

ಅದರೆ, ಮುಕೇಶ್ ಅವರಂಥ ದೊಡ್ಡ ವ್ಯಕ್ತಿ ಮತ್ತು ಅವರ ಒಡೆತನದ ಜಿಯೋ ಟೆಲಿಕಮ್ಯುನಿಕೇಶನ್ಸ್ ಸಂಸ್ಥೆಗೆ ಸುಳ್ಳು ಹೇಳುವ ಅಗತ್ಯವೇನಿತ್ತು ಅಂತ ಅವರು ಕೇಳುತ್ತಿದ್ದಾರೆ.

ಇದನ್ನೂ ಓದಿ: Puneeth Rajkumar: ಕೊಪ್ಪಳದ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಮನಸೋತ ​ಅಪ್ಪು; ವಿಡಿಯೊ ನೋಡಿ