ಹದಿಹರೆಯದಲ್ಲೇ ಪ್ರಧಾನಿ ಮೋದಿಯವರಲ್ಲಿ ರಾಷ್ಟ್ರಪ್ರೇಮ ಉಕ್ಕಿ ಹರಿಯುತಿತ್ತು, ಯುದ್ಧನಿರತ ಸೈನಿಕರಿಗೆ ಚಹಾ ಕುಡಿಸಿ ಧನ್ಯವಾದ ಹೇಳುತ್ತಿದ್ದರು!

ಹದಿಹರೆಯದಲ್ಲೇ ಪ್ರಧಾನಿ ಮೋದಿಯವರಲ್ಲಿ ರಾಷ್ಟ್ರಪ್ರೇಮ ಉಕ್ಕಿ ಹರಿಯುತಿತ್ತು, ಯುದ್ಧನಿರತ ಸೈನಿಕರಿಗೆ ಚಹಾ ಕುಡಿಸಿ ಧನ್ಯವಾದ ಹೇಳುತ್ತಿದ್ದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 17, 2021 | 9:40 PM

ಕಿರಿ ವಯಸ್ಸಿನಲ್ಲಿ ತಮಗೆ ಆಧ್ಯಾತ್ಮಿಕ ಬದುಕಿನತ್ತ ಸೆಳತ ಉಂಟಾಗಿತ್ತು ಅಂತ ನರೇಂದ್ರ ಮೋದಿಯವರು ಹೇಳಿಕೊಂಡಿದ್ದಾರೆ. ಅವರು ಒಂಟಿಯಾಗಿ ಹಿಮಾಲಯದ ತಪ್ಪಲಲ್ಲಿ ಓಡಾಡುತ್ತ ಅಲ್ಲಿರುತ್ತಿದ್ದ ಸಾಧು ಸಂತರೊಂದಿಗೆ ಮಾತಾಡುತ್ತಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ತಮ್ಮ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಬದುಕಿನ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರದ ಹಲವಾರು ಕುತೂಹಲಕಾರಿ ಅಂಶಗಳಿವೆ. ನಿಮಗೆ ನೆನಪಿರಬಹುದು. ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಹೋಗಿದ್ದಾಗ ಅಗಿನ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿಗಳ ಕುರಿತು ಮಾತಾಡುವಾಗ, ತಮ್ಮ ಸಂಘರ್ಷದ ದಿನಗಳಲ್ಲಿ ಮೋದಿ ಅವರು ಕೆಫೆಟೋರಿಯಾ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಅಂತ ಹೇಳಿದ್ದರು. ಖುದ್ದು ಪ್ರಧಾನಿಗಳೇ ಆ ಸಂಗತಿಯನ್ನು ನಿಸ್ಸಂಕೋಚದಿಂದ ಹೇಳಿಕೊಂಡಿದ್ದಾರೆ.

1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದಾಗ ಹದಿಹರೆಯದರಾಗಿದ್ದ ನರೇಂದ್ರ ಮೋದಿ ಅವರು, ಯುದ್ಧದಲ್ಲಿ ಪಾಲ್ಗೊಂಡಿದ್ದ ಬಾರತೀಯ ಸೈನಿಕರಿಗೆ ನೆರವಾಗುತ್ತಿದ್ದರು. ಸೈನಿಕರನ್ನು ಹೊತ್ತ ಟ್ರೇನು ಸ್ಟೇಶನ್ ಬಂದಾಗ ಮೋದಿ, ಬಿಸಿ ಬಿಸಿ ಮಸಾಲಾ ಚಹಾದ ಗ್ಲಾಸುಗಳನ್ನು ಅವರಿದ್ದ ಬೋಗಿಗೆ ಒಯ್ದು ಕೊಡುತ್ತಿದ್ದರು ಮತ್ತು ದೇಶಕ್ಕೆ ಅವರು ಒದಗಿಸುತ್ತಿದ್ದ ಸೇವೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದರು.

ಕಿರಿ ವಯಸ್ಸಿನಲ್ಲಿ ತಮಗೆ ಆಧ್ಯಾತ್ಮಿಕ ಬದುಕಿನತ್ತ ಸೆಳತ ಉಂಟಾಗಿತ್ತು ಅಂತ ನರೇಂದ್ರ ಮೋದಿಯವರು ಹೇಳಿಕೊಂಡಿದ್ದಾರೆ. ಅವರು ಒಂಟಿಯಾಗಿ ಹಿಮಾಲಯದ ತಪ್ಪಲಲ್ಲಿ ಓಡಾಡುತ್ತ ಅಲ್ಲಿರುತ್ತಿದ್ದ ಸಾಧು ಸಂತರೊಂದಿಗೆ ಮಾತಾಡುತ್ತಿದ್ದರು. ಅಗ ಒಂಟಿಯಾಗಿ ಓಡಾಡುತ್ತಿದ್ದ ಈ ಧೀಮಂತ ನಾಯಕನನ್ನು ಈಗ ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುತ್ತಿದೆ.

ಜಪಾನಿನ ಪ್ರಧಾನ ಮಂತ್ರಿಯಾಗಿದ್ದ ಶಿಂಜೊ ಅಬಿ ಅವರು ಯಾವತ್ತೂ ಇಂಗ್ಲಿಷ್ ಭಾಷೆಯಲ್ಲಿ ಟ್ವೀಟ್ ಮಾಡಿದವರಲ್ಲ. ಆದರೆ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತಾ ಜಪಾನ್ ಮತ್ತು ಇಂಡಿಯ ನಡುವಿನ ಡಿಪ್ಲೋಮೆಸಿಗಿಂತ ಉತ್ತಮ ಸ್ನೇಹಕ್ಕಾಗಿ ಹಾರೈಸಿ ಆಂಗ್ಲ ಭಾಷೆಯಲ್ಲಿ ಟ್ವೀಟ್ ಮಾಡಿದ್ದರು. ಅಬಿ ಅವರನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿರುವ ಕೇವಲ 4 ಜನರಲ್ಲಿ ಮೋದಿ ಒಬ್ಬರು.

ಫೋಟೋಗ್ರಫಿಯಲ್ಲಿ ಅವರು ಎಷ್ಟು ಅಭಿರುಚಿ ಇತ್ತೆಂದರೆ, ಇಪ್ಪತ್ತನೇ ವಯಸ್ಸಿನಲ್ಲಿ ಅವರು ತಾವು ಸೆರೆ ಹಿಡಿದ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದರು. ಅವರೊಬ್ಬ ಉತ್ತಮ ಕವಿ ಕೂಡ ಆಗಿದ್ದರೆನ್ನುವ ವಿಷಯ ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಶಾಲಾ ದಿನಗಳಲ್ಲಿ ಅವರು ನಾಟಕಗಳಲ್ಲಿ ಪಾರ್ಟು ಮಾಡುತ್ತಿದ್ದರಂತೆ.

ಬಾಲ್ಯದ ದಿನಗಳಿಂದಲೇ ಧೈರ್ಯಶಾಲಿಯಾಗಿದ್ದ ಮೋದಿ ಅವರು ಒಮ್ಮೆ ಮೊಸಳೆ ಮರಿಯನ್ನು ಎತ್ತಿಕೊಂಡು ಮನೆಗೆ ತಂದಿದ್ದರಂತೆ.

ಸಾರ್ವಜಿನಿಕ ಸಂಬಂಧಗಳು ಮತ್ತು ವ್ಯಕ್ತಿತ್ವ ನಿರ್ವಹಣೆಗೆ ಸಂಬಂಧಿಸಿದಂತೆ ಮೋದಿ ಅವರು ಮೂರು ತಿಂಗಳ ವ್ಯಾಸಂಗವನ್ನು ಅಮೆರಿಕಾದಲ್ಲಿ ಮಾಡಿದ್ದಾರೆ.

ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೋದಿ ಅವರು ಒಮ್ಮೆಯೂ ರಜೆ ತೆಗೆದುಕೊಳ್ಳಲಿಲ್ಲ. ತಮ್ಮೊಂದಿಗೆ ಕೆಲಸ ಮಾಡುತ್ತಿದ್ದವರಿಗೂ ಅವರು ರಜೆ ತೆಗೆದುಕೊಳ್ಳುವ ಗೋಜಿಗೆ ಹೋಗದಂತೆ ಸಲಹೆ ನೀಡುತ್ತಿದ್ದರು.

ಇದನ್ನೂ ಓದಿ:  PM Modi Birthday, Karnataka LIVE News: 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ; ಸಂಭ್ರಮಾಚರಣೆ ಹೇಗಿದೆ?