ರಜನಿಕಾಂತ್, ಪ್ರಭಾಸ್ ಸಿನಿಮಾ ಮಾಡೋಕೆ ಕರೆದಿದ್ರು, ನಾನು ಹೋಗಿಲ್ಲ; ಜೋಗಿ ಪ್ರೇಮ್
ಹೊಸ ಸಾಂಗ್ ರಿಲೀಸ್ ಮಾಡಿದ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು. ಈ ವೇಳೆ ‘ಲವ್, ಸೆಂಟಿಮೆಂಟ್ ಮೇಲೆ ಮಾತ್ರ ಏಕೆ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದೀರಿ’ ಎನ್ನುವ ಪ್ರಶ್ನೆಯನ್ನು ಪ್ರೇಮ್ಗೆ ಕೇಳಲಾಯಿತು.
ನಿರ್ದೇಶಕ ಜೋಗಿ ಪ್ರೇಮ್ಗೆ ಸಾಕಷ್ಟು ಬೇಡಿಕೆ ಇದೆ. ನಿರ್ದೇಶನದಲ್ಲಿ ಅವುರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಿರ್ದೇಶನದ ‘ಜೋಗಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಅವರು ‘ಏಕ್ ಲವ್ ಯಾ’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿತ್ತು. ಹೊಸ ಸಾಂಗ್ ರಿಲೀಸ್ ಮಾಡಿದ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು. ಈ ವೇಳೆ ‘ಲವ್, ಸೆಂಟಿಮೆಂಟ್ ಮೇಲೆ ಮಾತ್ರ ಏಕೆ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದೀರಿ’ ಎನ್ನುವ ಪ್ರಶ್ನೆಯನ್ನು ಪ್ರೇಮ್ಗೆ ಕೇಳಲಾಯಿತು. ಇದಕ್ಕೆ ಉತ್ತರಿಸುವಾಗ ಪರಭಾಷೆಯಿಂದ ಆಫರ್ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ. ‘ರಜನಿಕಾಂತ್, ಪ್ರಭಾಸ್ ನನ್ನನ್ನು ಕರೆದು ಸಿನಿಮಾ ಮಾಡುವಂತೆ ಹೇಳಿದರು. ಆದರೆ, ನಾನು ಮಾಡಿಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ನನ್ನ ಉಸಿರು ಇರೋವರೆಗೆ ಪುನೀತ್ ಫೋನ್ ನಂಬರ್ ಡಿಲೀಟ್ ಮಾಡಲ್ಲ’: ಜೋಗಿ ಪ್ರೇಮ್ ಭಾವುಕ ಮಾತು
‘ಊಟ, ತಿಂಡಿ ಇಲ್ಲದೇ ಗಾಂಧಿನಗರದಲ್ಲಿ ಅಲೆದವನು ನಾನು’: ಜೋಗಿ ಪ್ರೇಮ್ ಫ್ಲ್ಯಾಶ್ ಬ್ಯಾಕ್