ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!
Dubai Capitals vs Sharjah Warriorz: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ಹಾಗೂ ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಶಾರ್ಜಾ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಟಿ20 ಕ್ರಿಕೆಟ್ ಅಂದರೆ ಹೊಡಿಬಡಿಯಾಟ… ಅದರಲ್ಲೂ ಕಡಿಮೆ ಮೊತ್ತದ ಟಾರ್ಗೆಟ್ ಸಿಕ್ಕರೆ ಬ್ಯಾಟರ್ಗಳು ಅಬ್ಬರಿಸುವುದು ವಾಡಿಕೆ. ಆದರೆ ದುಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಪಂದ್ಯದಲ್ಲಿ ಸ್ಲೋ ಇನಿಂಗ್ಸ್ ಆಡಿದ ಜೋರ್ಡನ್ ಕಾಕ್ಸ್ ಸುದ್ದಿಯಾಗಿದ್ದಾರೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ಹಾಗೂ ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಶಾರ್ಜಾ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
135 ರನ್ಗಳ ಗುರಿ ಬೆನ್ನತ್ತಿದ ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಶಯಾನ್ ಜಹಾಂಗೀರ್ ಉತ್ತಮ ಆರಂಭ ಒದಗಿಸಿದ್ದರು. 39 ಎಸೆತಗಳನ್ನು ಎದುರಿಸಿದ ಶಯಾನ್ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 51 ರನ್ ಬಾರಿಸಿದ್ದರು.
ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋರ್ಡನ್ ಕಾಕ್ಸ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದರು. ಬರೋಬ್ಬರಿ 50 ಎಸೆತಗಳನ್ನು ಎದುರಿಸಿದ ಜೋರ್ಡನ್ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 61 ರನ್ ಕಲೆಹಾಕಿದರು.
ಕಾಕ್ಸ್ ಅವರ ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ 135 ರನ್ಗಳ ಗುರಿ ತಲುಪಲು ದುಬೈ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 19.1 ಓವರ್ಗಳನ್ನು ತೆಗೆದುಕೊಂಡಿತು. ಅಂದರೆ ಕೊನೆಯ ಓವರ್ನಲ್ಲಿ 6 ವಿಕೆಟ್ಗಳ ಜಯ ದಕ್ಕಿಸಿಕೊಂಡಿದ್ದರು.
ಅಂದಹಾಗೆ ಜೋರ್ಡನ್ ಕಾಕ್ಸ್ ಮುಂಬರುವ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಮಿಜಿ ಹರಾಜಿನ ಮೂಲಕ ಕಾಕ್ಸ್ ಅವರನ್ನು ಆರ್ಸಿಬಿ 75 ಲಕ್ಷ ರೂ.ಗೆ ಖರೀದಿಸಿದೆ.
