ಕೊಲ್ಲೂರು ಮೂಕಾಂಬಿಕೆ ದರ್ಶನ್ ಮಾಡಿದ ಜೂ ಎನ್​ಟಿಆರ್

|

Updated on: Sep 01, 2024 | 3:39 PM

Jr NTR: ನಿನ್ನೆಯೇ ಕುಟುಂಬದೊಡನೆ ಕರ್ನಾಟಕಕ್ಕೆ ಆಗಮಿಸಿರುವ ತೆಲುಗಿನ ಸ್ಟಾರ್ ನಟ ಜೂ ಎನ್​ಟಿಆರ್ ಇಂದು ಕೊಲ್ಲೂರು ಮೂಕಾಂಭಿಕೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಟ ರಿಷಬ್ ಶೆಟ್ಟಿ ಸಹ ಜೊತೆಗಿದ್ದರು.

ತೆಲುಗಿನ ಸ್ಟಾರ್ ನಟ ಜೂ ಎನ್​ಟಿಆರ್ ಕರ್ನಾಟಕ ಪ್ರವಾಸಕ್ಕೆ ಆಗಮಿಸಿದ್ದಾರೆ. ನಿನ್ನೆ, ಪತ್ನಿ ಮತ್ತು ತಾಯಿಯ ಜೊತೆಗೆ ಮಂಗಳೂರಿಗೆ ಬಂದಿಳಿದ ಜೂ ಎನ್​ಟಿಆರ್ ಅವರನ್ನು ನಟ ರಿಷಬ್ ಶೆಟ್ಟಿ ಸ್ವಾಗತಿಸಿದರು. ಜೂ ಎನ್​ಟಿಆರ್ ತಾಯಿಯವರ ಆಸೆಯಂತೆ ಅವರ ಹುಟ್ಟೂರಾದ ಕುಂದಾಪುರಕ್ಕೆ ಕರೆತಂದಿದ್ದರು. ಉಡುಪಿ ಶ್ರೀಕೃಷ್ಣನ ದರ್ಶನ ಮಾಡಿಸಿದರು. ನಿನ್ನೆ ಜೂ ಎನ್​ಟಿಆರ್ ಕುಟುಂಬದ ಜೊತೆಗೆ ರಿಷಬ್ ಶೆಟ್ಟಿ ಕುಟುಂಬ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕುಟುಂಬ ಸಹ ಸೇರಿಕೊಂಡಿತ್ತು. ಇಂದು ಸಹ ಜೂ ಎನ್​ಟಿಆರ್ ಅವರ ಟೆಂಪಲ್ ರನ್ ಮುಂದುವರೆದಿದ್ದು, ಇಂದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಂದೂ ಸಹ ಜೂ ಎನ್​ಟಿಆರ್​ಗೆ ರಿಷಬ್ ಶೆಟ್ಟಿ ಹಾಗೂ ನೀಲ್ ಜೊತೆಯಾಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ