ವಿಷ್ಣು ಸಮಾಧಿ ಧ್ವಂಸ: ಬಾಲಣ್ಣ ಕುಟುಂಬದ ಜೊತೆ ಕೆ. ಮಂಜು ಮಾಡಿದ ಮಾತುಕತೆ ಏನು?

Updated on: Aug 24, 2025 | 1:44 PM

ಲಕ್ಷಾಂತರ ಜನರ ರೀತಿ ನಿರ್ಮಾಪಕ ಕೆ. ಮಂಜು ಅವರು ಕೂಡ ವಿಷ್ಣುವರ್ಧನ್ ಅಭಿಮಾನಿ. ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣು ಸಮಾಧಿ ಇತ್ತೀಚೆಗೆ ನೆಲಸಮ ಆಗಿದ್ದಕ್ಕೆ ಕೆ. ಮಂಜು ಅವರಿಗೂ ನೋವಾಗಿದೆ. ಹೇಗಾದರೂ ಮಾಡಿ ಪುಣ್ಯಭೂಮಿ ಸ್ಥಳವನ್ನು ಉಳಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಪ್ರಯತ್ನಿಸುತ್ತಿದ್ದಾರೆ.

ನಿರ್ಮಾಪಕ ಕೆ. ಮಂಜು ಅವರು ವಿಷ್ಣುವರ್ಧನ್ ಅಭಿಮಾನಿ. ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣು ಸಮಾಧಿ (Vishnuvardhan Samadhi) ನೆಲಸಮ ಆಗಿದ್ದಕ್ಕೆ ಕೆ. ಮಂಜು ಅವರಿಗೂ ನೋವಾಗಿದೆ. ಹೇಗಾದರೂ ಮಾಡಿ ಪುಣ್ಯಭೂಮಿ ಸ್ಥಳವನ್ನು ಉಳಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಪ್ರಯತ್ನಿಸುತ್ತಿದ್ದಾರೆ. ಅದರ ಸಲುವಾಗಿ ಕೆ. ಮಂಜು ಅವರು ಬಾಲಣ್ಣ ಕುಟುಂಬದ ಸದಸ್ಯರ ಜೊತೆ ಮಾತನಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಏನೆಲ್ಲ ಮಾತುಕಥೆ ನಡೆದಿದೆ? ಮುಂದಿನ ನಡೆ ಏನು ಎಂಬುದನ್ನು ಕೆ. ಮಂಜು (K Manju) ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More