ಸರ್ಕಾರದ ಸಹಾಯ ಬೇಡ, ಅಭಿಮಾನಿಗಳೇ ವಿಷ್ಣು ಸ್ಮಾರಕ ಕಟ್ತೀವಿ: ಕೆ ಮಂಜು
Vishnuvardhan Samadhi: ಟಿವಿ9 ಜೊತೆಗೆ ಮಾತನಾಡಿರುವ ನಿರ್ಮಾಪಕ ಕೆ ಮಂಜು, ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಿಯೇ ಸಿದ್ಧ ಎಂದಿದ್ದಾರೆ. ಮುಂದುವರೆದು, ನಮಗೆ (ವಿಷ್ಣು ಅಭಿಮಾನಿಗಳಿಗೆ) ಸರ್ಕಾರದ ಹಣ ಬೇಕಿಲ್ಲ, ನಾವು ಅಭಿಮಾನಿಗಳೇ ಸೇರಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುತ್ತೇವೆ ಎಂದಿದ್ದಾರೆ. ಕೆ ಮಂಜು ಅವರು ಹೇಳಿರುವುದೇನು? ಇಲ್ಲಿದೆ ನೋಡಿ ವಿಡಿಯೋ...
ನಿರ್ಮಾಪಕ ಕೆ ಮಂಜು, ವಿಷ್ಣುವರ್ಧನ್ ಅವರ ಅಭಿಮಾನಿ. ಅವರ ಸಿನಿಮಾಗಳಿಗೆ ಬಂಡವಾಳ ಸಹ ಹೂಡಿದ್ದಾರೆ. ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ಬಾಲಣ್ಣ ಕುಟುಂಬದವರು ನೆಲಸಮ ಮಾಡಿದ ವಿಚಾರ ಅವರಿಗೆ ನೋವುಂಟು ಮಾಡಿರುವುದಾಗಿ ತಿಳಿಸಿರುವ ಕೆ ಮಂಜು, ವಿಷ್ಣು ಸ್ಮಾರಕ ನಿರ್ಮಾಣ ಮಾಡಿಯೇ ಸಿದ್ಧ ಎಂದಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ನಿರ್ಮಾಪಕ ಕೆ ಮಂಜು, ನಮಗೆ (ವಿಷ್ಣು ಅಭಿಮಾನಿಗಳಿಗೆ) ಸರ್ಕಾರದ ಹಣ ಬೇಕಿಲ್ಲ, ನಾವು ಅಭಿಮಾನಿಗಳೇ ಸೇರಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುತ್ತೇವೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 29, 2025 03:43 PM
