ಅಧಿಕಾರಿಯಾಗಿ ಕೆ. ಶಿವರಾಮ್​ ಮಾಡಿದ ಜನಸೇವೆ ನೆನೆದು ಬಿಕ್ಕಿ ಬಿಕ್ಕಿ ಅತ್ತ ಪತ್ನಿ ವಾಣಿ

|

Updated on: Mar 01, 2024 | 7:04 PM

ಐಎಎಸ್​ ಅಧಿಕಾರಿಯಾಗಿ ಕೆಲಸ ಮಾಡಿದ್ದ ಕೆ. ಶಿವರಾಮ್​ ಅವರು ಲೆಕ್ಕವಿಲ್ಲದಷ್ಟು ಜನರ ಸಮಸ್ಯೆಯನ್ನು ಪರಿಹರಿಸಿದ್ದರು. ಜನಪರವಾದ ಕಾರ್ಯಗಳ ಮೂಲಕ ಅವರು ಮನೆಮಾತಾಗಿದ್ದರು. ಅವರ ಜನಸೇವೆಯನ್ನು ನೆನೆದು ಈಗ ಪತ್ನಿ ವಾಣಿ ಕಣ್ಣೀರು ಸುರಿಸಿದ್ದಾರೆ. ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು, ಅಭಿಮಾನಿಗಳು ಹಾಗೂ ಬೆಂಬಲಿಗರು ಬಂದು ಅಂತಿಮ ದರ್ಶನ ಪಡೆದಿದ್ದಾರೆ.

‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಖ್ಯಾತಿಯ ನಟ ಕೆ. ಶಿವರಾಮ್​ (K Shivaram) ಅವರು ಅನಾರೋಗ್ಯದಿಂದ ಗುರುವಾರ (ಫೆ.29) ನಿಧನರಾದರು. ಇಂದು (ಮಾ.1) ಅವರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಶಿವರಾಮ್​ ನಿಧನದಿಂದ (K Shivaram Death) ಅವರ ಕುಟುಂಬಕ್ಕೆ ತೀವ್ರ ಆಘಾತ ಆಗಿದೆ. ಐಎಎಸ್​ ಅಧಿಕಾರಿ ಆಗಿದ್ದ ಶಿವರಾಮ್​ ಅವರು ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು ಅಧಿಕಾರದಲ್ಲಿ ಇದ್ದಾಗ ಅನೇಕ ಜನರಿಗೆ ನೆರವಾಗಿದ್ದರು. ಬಡ ಜನರ ಸಮಸ್ಯೆಗಳನ್ನು ಪರಿಹರಿಸಿದ್ದರು. ಈಗ ಶಿವರಾಮ್​ ಅವರನ್ನು ಕಳೆದುಕೊಂಡು ಬೆಂಬಲಿಗರು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಕೆ. ಶಿವರಾಮ್​ ಅವರ ಪತ್ನಿ (K Shivaram Wife) ವಾಣಿ ಅವರು ಕಣ್ಣೀರು ಹಾಕುತ್ತಿದ್ದಾರೆ. ಪತಿಯನ್ನು ಕಳೆದುಕೊಂಡು ಅವರಿಗೆ ದಿಕ್ಕು ತೋಚದಂತೆ ಆಗಿದೆ. ‘ಕೊನೆವರೆಗೂ ಜನ ಜನ ಅಂತಾನೇ ಹೋಗಿಬಿಟ್ರಲ್ಲ’ ಎಂದು ವಾಣಿ ಅವರು ಅತ್ತಿದ್ದಾರೆ. ಅವರನ್ನು ಸಮಾಧಾನ ಮಾಡಲು ಕುಟುಂಬದವರು ಪ್ರಯತ್ನಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಬಂದು ಕೆ. ಶಿವರಾಮ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಿಡದಿ ಸಮೀಪ ಇರುವ ಉರಗಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.