ಕ್ಷೇತ್ರದ ಕಾರ್ಯಕರ್ತರಿಗೆ ಬಾಡೂಟದ ಔತಣ ಏರ್ಪಡಿಸಿದ ಸತೀಶ್ ಜಾರಕಿಹೊಳಿ, ಮಗಳನ್ನು ರಾಜಕೀಯಕ್ಕೆ ತರುವ ತಯಾರಿ?

ಕ್ಷೇತ್ರದ ಕಾರ್ಯಕರ್ತರಿಗೆ ಬಾಡೂಟದ ಔತಣ ಏರ್ಪಡಿಸಿದ ಸತೀಶ್ ಜಾರಕಿಹೊಳಿ, ಮಗಳನ್ನು ರಾಜಕೀಯಕ್ಕೆ ತರುವ ತಯಾರಿ?

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 01, 2024 | 7:28 PM

ಸಂಭಾವ್ಯ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳ ಕಾರ್ಯಕರ್ತರ ವಿಶ್ವಾಸ ಗೆದ್ದುಕೊಳ್ಳಲು ಹೀಗೆ ಬಾಡೂಟ, ಎಣ್ಣೆ ಪಾರ್ಟಿ ಆಯೋಜಿಸುವುದು ನಮ್ಮ ದೇಶದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಈಗ್ಲೇ ಅವೆಲ್ಲವನ್ನೂ ಮಾಡಬೇಕು, ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಮಾಡಲಾಗಲ್ಲ.

ಬೆಳಗಾವಿ: ಇನ್ನು ಮುಂದೆ ಇಂಥ ದೃಶ್ಯಗಳ ಸಾಮಾನ್ಯವಾಗಲಿವೆ. ಲೋಕಸಭಾ ಚುನಾವಣೆ ಶೆಡ್ಯೂಲ್ (General Election schedule) ಪ್ರಕಟವಾಗಿದೆ. ಸಂಭಾವ್ಯ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳ ಕಾರ್ಯಕರ್ತರ ವಿಶ್ವಾಸ ಗೆದ್ದುಕೊಳ್ಳಲು ಹೀಗೆ ಬಾಡೂಟ, ಎಣ್ಣೆ ಪಾರ್ಟಿ ಆಯೋಜಿಸುವುದು ನಮ್ಮ ದೇಶದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಈಗ್ಲೇ ಅವೆಲ್ಲವನ್ನೂ ಮಾಡಬೇಕು, ಮಾದರಿ ನೀತಿ ಸಂಹಿತೆ (Model Code of Conduct) ಜಾರಿಯಾದ ಬಳಿಕ ಮಾಡಲಾಗಲ್ಲ. ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಖಾತೆ ಸಚಿವರಾಗಿರುವ ಸತೀಶ್ ಜಾರಕಿಹೊಳಿ (Satish Jarkiholi) ಬೆಳಗಾವಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಇವತ್ತು ಔತಣಕೂಟ ಏರ್ಪಡಿಸಿದ್ದರು. ಔತಣಕ್ಕೆ ಸಿದ್ದ್ಧವಾಗಿರುವ ಮಾಂಸಾಹಾರಿ ಭಕ್ಷ್ಯಗಳನ್ನು ದೃಶ್ಯಗಳಲ್ಲಿ ನೋಡಬಹುದು. ಒಂದು ಬೋಗುಣಿಯಲ್ಲಿ ಮಟನ್ ಮಸಾಲಾ ಅಥವಾ ಮಟನ್ ಡ್ರೈ, ಮತ್ತೊಂದರಲ್ಲಿ ಮಟನ್ ಕರಿ, ಇನ್ನೊಂದರಲ್ಲಿ ಮಟನ್ ಕೀಮಾ ಕರಿ ಹಾಗೂ ಗ್ರೇವಿ ತಯಾರಾಗಿದ್ದು ಅಡುಗೆಯವರು ಪೈನಲ್ ಟಚ್ ನೀಡುತ್ತಿದ್ದಾರೆ. ಅನ್ನದ ಐಟಂಗಳು ಎರಡು ಇವೆ ಅನಿಸುತ್ತೆ. ರೋಟಿ (ನಾನ್, ರುಮಾಲಿ) ಅಥವಾ ಜೋಳದ ಇಲ್ಲವೇ ಗೋಧಿ ರೊಟ್ಟಿಗಳು ಬೇರೆ ಕಡೆ ತಯಾರಾಗಿರಬಹುದು. ಒಂದು ಮೂಲದ ಪ್ರಕಾರ ಸತೀಶ್ ಜಾರಕಿಹೊಳಿಯವರು ತಮ್ಮ ಪುತ್ರಿಗಾಗಿ ಟಿಕೆಟ್ ಕೇಳಿದ್ದಾರೆ. ಮಗಳು ಸಹ ಅಪ್ಪ ಹೇಳಿದರೆ ರಾಜಕೀಯಕ್ಕೆ ಬರ್ತೀನಿ ಅಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭಾ ಚುನಾವಣೆ 2024: ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಬೆಳಗಾವಿ ಟಿಕೆಟ್; ಸತೀಶ್ ಜಾರಕಿಹೊಳಿ