ದರ್ಶನ್​ಗೆ ಇನ್ನು ಐದು ದಿನ ಕಾಲಾವಕಾಶ: ಮಹಿಳಾ ಆಯೋಗ ಅಧ್ಯಕ್ಷೆ

ದರ್ಶನ್​ಗೆ ಇನ್ನು ಐದು ದಿನ ಕಾಲಾವಕಾಶ: ಮಹಿಳಾ ಆಯೋಗ ಅಧ್ಯಕ್ಷೆ

ಮಂಜುನಾಥ ಸಿ.
|

Updated on: Mar 01, 2024 | 6:38 PM

Darshan Thoogudeepa: ನಟ ದರ್ಶನ್​ ವಿರುದ್ಧ ಮಹಿಳಾ ಸಂಘಟನೆಯೊಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಅದರನ್ವಯ ಆಯೋಗವು ನೊಟೀಸ್ ನೀಡಿದೆ. ಇನ್ನೈದು ದಿನಗಳಲ್ಲಿ ದರ್ಶನ್ ನೊಟೀಸ್​ಗೆ ಉತ್ತರಿಸಬೇಕಿದೆ.

ನಟ ದರ್ಶನ್​ಗೆ (Darshan Thoogudeepa) ಮತ್ತೆ ವಿವಾದಗಳು ಸುತ್ತಿಕೊಂಡಿವೆ. ಶ್ರೀರಂಗಪಟ್ಟಣದಲ್ಲಿ ನಡೆದಿದ್ದ ‘ದರ್ಶನ್ ಬೆಳ್ಳಿಪರ್ವ’ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡಿದ್ದ ನಟ ದರ್ಶನ್, ಮಹಿಳೆಯರ ಬಗ್ಗೆ ಲಘು ಪದಗಳಲ್ಲಿ ಮಾತನಾಡಿದ್ದಾರೆಂದು ಆರೋಪಿಸಿ ಮಹಿಳಾ ಸಂಘಟನೆಯೊಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಪ್ರಕರಣದ ಸಂಬಂಧ ಆಯೋಗವು ದರ್ಶನ್ ಅವರಿಗೆ ನೊಟೀಸ್ ನೀಡಿದೆ. ನೊಟೀಸ್​ಗೆ ಉತ್ತರಿಸಲು ಏಳು ದಿನಗಳ ಕಾಲಾವಕಾಶವನ್ನು ದರ್ಶನ್ ಅವರಿಗೆ ನೀಡಲಾಗಿದ್ದು ಮಾರ್ಚ್ 1ಕ್ಕೆ ನೊಟೀಸ್ ನೀಡಿ ಎರಡು ದಿನಗಳಾಗಿರುವ ಕಾರಣ ಇನ್ನೈದು ದಿನಗಳಲ್ಲಿ ದರ್ಶನ್ ನೊಟೀಸ್​ಗೆ ಪ್ರತಿಕ್ರಿಯೆ ನೀಡಬೇಕಿದೆ. ದರ್ಶನ್​ ಅವರು ನೊಟೀಸ್​ಗೆ ಪ್ರತಿಕ್ರಿಯೆ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ