‘ಒಂದೇ ಹಾಡಿನಲ್ಲಿ ಅಡಗಿದೆ ಇಡೀ ಚಿತ್ರದ ಕಥೆಯ ಸಾರ’: ‘ಗೋರುಕನ ಗಾನ’ ಬಗ್ಗೆ ಮಾಹಿತಿ ನೀಡಿದ ವಿಕ್ಕಿ ವರುಣ್​

‘ಒಂದೇ ಹಾಡಿನಲ್ಲಿ ಅಡಗಿದೆ ಇಡೀ ಚಿತ್ರದ ಕಥೆಯ ಸಾರ’: ‘ಗೋರುಕನ ಗಾನ’ ಬಗ್ಗೆ ಮಾಹಿತಿ ನೀಡಿದ ವಿಕ್ಕಿ ವರುಣ್​

ಮದನ್​ ಕುಮಾರ್​
|

Updated on: Oct 12, 2023 | 7:09 PM

ವಿಕ್ಕಿ ವರುಣ್​ ನಿರ್ದೇಶನ ಮಾಡಿರುವ ‘ಕಾಲಪತ್ಥರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ವಿಕ್ಕಿ ವರುಣ್​ ಹೀರೋ ಆಗಿಯೂ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಧನ್ಯಾ ರಾಮ್​ಕುಮಾರ್​ ಅಭಿನಯಿಸಿದ್ದಾರೆ. ಇತ್ತೀಚೆಗೆ ‘ಕಾಲಾಪತ್ಥರ್​’ ಚಿತ್ರದಿಂದ ‘ಗೋರುಕನ ಗಾನ..’ ಹಾಡು ಬಿಡುಗಡೆ ಆಗಿದೆ.

‘ಕೆಂಡಸಂಪಿಗೆ’ ಸಿನಿಮಾದ ಮೂಲಕ ನಟನಾಗಿ ಜನರಿಗೆ ಪರಿಚಯವಾದವರು ವಿಕ್ಕಿ ವರುಣ್​. ಈಗ ಅವರು ನಿರ್ದೇಶಕನಾಗಿಯೂ ಬ್ಯುಸಿ ಆಗಿದ್ದಾರೆ. ಅವರು ನಿರ್ದೇಶನ ಮಾಡಿರುವ ಕಾಲಪತ್ಥರ್​’ ಸಿನಿಮಾ (Kaalapatthar Movie) ಬಿಡುಗಡೆಗೆ ಸಜ್ಜಾಗುದೆ. ಈ ಸಿನಿಮಾದಲ್ಲಿ ವಿಕ್ಕಿ ವರುಣ್​ (Vikky Varun) ಅವರು ಹೀರೋ ಆಗಿಯೂ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಧನ್ಯಾ ರಾಮ್​ಕುಮಾರ್​ ಅಭಿನಯಿಸಿದ್ದಾರೆ. ಇತ್ತೀಚೆಗೆ ‘ಕಾಲಾಪತ್ಥರ್​’ ಚಿತ್ರದಿಂದ ‘ಗೋರುಕನ ಗಾನ..’ (Gorukana Gana) ಹಾಡು ಬಿಡುಗಡೆ ಆಗಿದೆ. ಸಾಂಗ್​ ರಿಲೀಸ್​ ಸಮಯದಲ್ಲಿ ಅವರು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಒಂದೇ ಹಾಡಿನಲ್ಲಿ ಇಡೀ ಸಿನಿಮಾದ ಕಥೆಯ ಸಾರಾಂಶವನ್ನು ಹಿಡಿದಿಡಲಾಗಿದೆ ಎಂದು ವಿಕ್ಕಿ ವರುಣ್​ ಹೇಳಿದ್ದಾರೆ. ಹೊಸ ಗಾಯಕಿ ಶಿವಾನಿ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.