ಬೇರೆ ದೇಶಗಳ ಜನ ಬೆಂಗಳೂರನ್ನು ಐಟಿ-ಬಿಟಿ ರಾಜಧಾನಿ ಜೊತೆ ರಾಷ್ಟ್ರದ ರಾಜಧಾನಿ ಅಂತಲೂ ಭಾವಿಸಿದ್ದಾರೆ: ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ

ಟೆಕ್ನಾಲಜಿ ಕ್ಲಸ್ಟರ್ ನಲ್ಲಿ ವಿಶ್ವದ 4ನೇ ಅತಿದೊಡ್ಡ ಕೇಂದ್ರವೆನಿಸಿರುವ ಬೆಂಗಳೂರು ಅವಿಷ್ಕಾರಗಳ ವಿಷಯಕ್ಕೆ ಬಂದರೆ ವಿಶ್ವದಲ್ಲಿ 18 ನೇ ಸ್ಥಾನದಲ್ಲಿದೆ. ಟಾಪ್ ಹತ್ತರಲ್ಲಿ ಸ್ಥಾನ ಪಡೆಯಬೇಕಾದರೆ ವಿದೇಶೀ ಕಂಪನಿಗಳ ಸಹಭಾಗಿತ್ವ ಮಾಡಿಕೊಂಡು ಇಕೋ ಸಿಸ್ಟಮ್ ವೃದ್ಧಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಖರ್ಗೆ ಹೇಳಿದರು.

ಬೇರೆ ದೇಶಗಳ ಜನ ಬೆಂಗಳೂರನ್ನು ಐಟಿ-ಬಿಟಿ ರಾಜಧಾನಿ ಜೊತೆ ರಾಷ್ಟ್ರದ ರಾಜಧಾನಿ ಅಂತಲೂ ಭಾವಿಸಿದ್ದಾರೆ: ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ
|

Updated on: Oct 12, 2023 | 6:04 PM

ಬೆಂಗಳೂರು: ವಿಕಾಸ ಸೌಧದಲ್ಲಿ ಇಂದು ಎಂಬಿ ಪಾಟೀಲ್ (MB Patil) ಅವರೊಂದಿಗೆ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಐಟ-ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಬೆಂಗಳೂರು ಈಗ ಸ್ಟಾರ್ಟ್ ಅಪ್ ರಾಜಧಾನಿ (Startup capital) ಅನಿಸಿಕೊಂಡಿದೆ ಎಂದು ಹೇಳಿದರು. ಟೆಕ್ನಾಲಜಿ ಕ್ಲಸ್ಟರ್ ನಲ್ಲಿ ವಿಶ್ವದ 4ನೇ ಅತಿದೊಡ್ಡ ಕೇಂದ್ರವೆನಿಸಿರುವ ಬೆಂಗಳೂರು ಅವಿಷ್ಕಾರಗಳ ವಿಷಯಕ್ಕೆ ಬಂದರೆ ವಿಶ್ವದಲ್ಲಿ 18 ನೇ ಸ್ಥಾನದಲ್ಲಿದೆ. ಟಾಪ್ ಹತ್ತರಲ್ಲಿ ಸ್ಥಾನ ಪಡೆಯಬೇಕಾದರೆ ವಿದೇಶೀ ಕಂಪನಿಗಳ ಸಹಭಾಗಿತ್ವ ಮಾಡಿಕೊಂಡು ಇಕೋ ಸಿಸ್ಟಮ್ ವೃದ್ಧಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಖರ್ಗೆ ಹೇಳಿದರು. ಅಮೆರಿಕದ ಇಂಡಸ್ ಆಂತ್ರೆಪ್ರೆನಾರ್ಸ್ ನವೋದ್ಯಮ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು, ಅವರು ಪ್ರತಿವರ್ಷ ವಿಶ್ವದ ನಾನಾಭಾಗಗಳಲ್ಲಿ ಕಾರ್ಯಕ್ರಮಗಳನ್ನು (ಸ್ಟಾರ್ಟ್ಅಪ್ ಈವೆಂಟ್) ನಡೆಸುತ್ತಾರೆ. ಇದಕ್ಕೆ ಮೊದಲು ಲಂಡನ್, ಪ್ಯಾರಿಸ್ ನಗರಗಳಲ್ಲಿ ವಾರ್ಷಿಕ ಸ್ಟಾರ್ಟ್ ಅಪ್ ಈವೆಂಟ್ ನಡೆಸಿರುವ ಅವರು ಈ ವರ್ಷ ಬೆಂಗಳೂರಲ್ಲಿ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕನಿಷ್ಟ 25,000 ಸ್ಟಾರ್ಟ್ ಅಪ್ ಕಂಪನಿಗಳು ಭಾಗವಸಲಿದ್ದು ಕರ್ನಾಟಕದಲ್ಲಿ ನೋಂದಣಿಯಾಗಿರುವ ಸುಮಾರರು 28,000 ಸಾವಿರ ನವೋದ್ಯಮಗಳಿಗೆ ದೊಡ್ಡ ಬೂಸ್ಟ್ ಸಿಗಲಿದೆ ಮತ್ತು ಇಕೋ ಸಿಸ್ಟಮ್ ದೊಡ್ಡದಾಗಲಿದೆ ಎಂದು ಸಚಿವ ಖರ್ಗೆ ಹೇಳಿದರು. ಭಾರತದ ಹೊರಗೆ ಬೆಂಗಳೂರು ನಗರ ಕೇವಲ ಐಟಿ-ಬಿಟಿ ಕೇಂದ್ರ ಅಂತ ಗುರುತಿಸಿಕೊಂಡಿಲ್ಲ ಹಲವಾರು ರಾಷ್ಟ್ರಗಳಲ್ಲಿ ಬೆಂಗಳೂರನ್ನೇ ಭಾರತದ ರಾಜಧಾನಿ ಅಂತ ಜನ ಭಾವಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​