Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಲಿಸಂಪರ್ಕ ಇಲಾಖೆಯಿಂದ ಟೆಸ್ಟಿಂಗ್ ಅಲರ್ಟ್ ಬಂದಾಗ ಡಿಕೆ ಶಿವಕುಮಾರ್ ಬಿಜೆಪಿ-ಜೆಡಿಎಸ್ ಪಕ್ಷಗಳು ಕೂಡ ಅಲರ್ಟ್ ಆಗಲಿ ಅಂದರು!

ಟೆಲಿಸಂಪರ್ಕ ಇಲಾಖೆಯಿಂದ ಟೆಸ್ಟಿಂಗ್ ಅಲರ್ಟ್ ಬಂದಾಗ ಡಿಕೆ ಶಿವಕುಮಾರ್ ಬಿಜೆಪಿ-ಜೆಡಿಎಸ್ ಪಕ್ಷಗಳು ಕೂಡ ಅಲರ್ಟ್ ಆಗಲಿ ಅಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 12, 2023 | 2:18 PM

ಶಿವಕುಮಾರ್ ಅವರಿಗೆ ವಿಷಯ ಗೊತ್ತಿರಲಿಲ್ಲ. ಅವರ ಎಡಬಲದಲ್ಲಿ ಕೂತಿದ್ದ ಪಕ್ಷದ ಕಾರ್ಯಾಧ್ಯಕ್ಷ ಎಂಎ ಸಲೀಂ ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ ಅದರ ಬಗ್ಗೆ ವಿವರಣೆ ನೀಡುತ್ತಾರೆ. ಅಗ ಶಿವಕುಮಾರ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಸಹ ಅಲರ್ಟ್ ಅಗಲಿ ಅನ್ನುತ್ತಾರೆ! ಅದಕ್ಕೇ ಹೇಳಿದ್ದು; ವಿಷಯ ಯಾವುದಾದರೇನು, ಒಂದಷ್ಟು ರಾಜಕೀಯ ಅದಕ್ಕೆ ಬೆರೆಸಬೇಕು!

ಬೆಂಗಳೂರು: ರಾಜಕಾರಣಿಗಳ ಜಾಯಮಾನವೇ ಹಾಗೆ ಮಾರಾಯ್ರೇ, ಪ್ರತಿಯೊಂದು ಸಂಗತಿಯನ್ನು ರಾಜಕೀಯದ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತಾಡುತ್ತಿದ್ದಾಗ ನಡೆದ ಘಟನೆಯನ್ನೇ ಗಮನಿಸಿ. ಇವತ್ತು ಸಕಲ ಭಾರತೀಯರಿಗೆ ಕೇಂದ್ರ ಟೆಲಿಸಂಪರ್ಕ ಇಲಾಖೆಯು (Department of Telecommunications) ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯೊಂದಿಗೆ (NDMA) ಸೆಲ್ ಬ್ರಾಡ್ಕಾಸ್ಟ್ ಟೆಸ್ಟಿಂಗ್ ನಡೆಸಿದಾಗ ಟೆಸ್ಟ್ ಅಲರ್ಟ್ ಗಳು ಬಂದವು. ಟೆಲಿಕಮ್ಯೂನಿಕೇಷನ್ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ಒಂದು ದಿನ ಮೊದಲು ಸಂದೇಶವನ್ನು ಪ್ರತಿಯೊಬ್ಬರ ಮೊಬೈಲ್ ಗಳಿಗೆ ರವಾನಿಸಿತ್ತು. ಶಿವಕುಮಾರ್ ಅವರಿಗೆ ವಿಷಯ ಗೊತ್ತಿರಲಿಲ್ಲ. ಅವರ ಎಡಬಲದಲ್ಲಿ ಕೂತಿದ್ದ ಪಕ್ಷದ ಕಾರ್ಯಾಧ್ಯಕ್ಷ ಎಂಎ ಸಲೀಂ ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ ಅದರ ಬಗ್ಗೆ ವಿವರಣೆ ನೀಡುತ್ತಾರೆ. ಅಗ ಶಿವಕುಮಾರ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಸಹ ಅಲರ್ಟ್ ಅಗಲಿ ಅನ್ನುತ್ತಾರೆ! ಅದಕ್ಕೇ ಹೇಳಿದ್ದು; ವಿಷಯ ಯಾವುದಾದರೇನು, ಒಂದಷ್ಟು ರಾಜಕೀಯ ಅದಕ್ಕೆ ಬೆರೆಸಬೇಕು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ