‘ಒಂದೇ ಹಾಡಿನಲ್ಲಿ ಅಡಗಿದೆ ಇಡೀ ಚಿತ್ರದ ಕಥೆಯ ಸಾರ’: ‘ಗೋರುಕನ ಗಾನ’ ಬಗ್ಗೆ ಮಾಹಿತಿ ನೀಡಿದ ವಿಕ್ಕಿ ವರುಣ್
ವಿಕ್ಕಿ ವರುಣ್ ನಿರ್ದೇಶನ ಮಾಡಿರುವ ‘ಕಾಲಪತ್ಥರ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ವಿಕ್ಕಿ ವರುಣ್ ಹೀರೋ ಆಗಿಯೂ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಧನ್ಯಾ ರಾಮ್ಕುಮಾರ್ ಅಭಿನಯಿಸಿದ್ದಾರೆ. ಇತ್ತೀಚೆಗೆ ‘ಕಾಲಾಪತ್ಥರ್’ ಚಿತ್ರದಿಂದ ‘ಗೋರುಕನ ಗಾನ..’ ಹಾಡು ಬಿಡುಗಡೆ ಆಗಿದೆ.
‘ಕೆಂಡಸಂಪಿಗೆ’ ಸಿನಿಮಾದ ಮೂಲಕ ನಟನಾಗಿ ಜನರಿಗೆ ಪರಿಚಯವಾದವರು ವಿಕ್ಕಿ ವರುಣ್. ಈಗ ಅವರು ನಿರ್ದೇಶಕನಾಗಿಯೂ ಬ್ಯುಸಿ ಆಗಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಕಾಲಪತ್ಥರ್’ ಸಿನಿಮಾ (Kaalapatthar Movie) ಬಿಡುಗಡೆಗೆ ಸಜ್ಜಾಗುದೆ. ಈ ಸಿನಿಮಾದಲ್ಲಿ ವಿಕ್ಕಿ ವರುಣ್ (Vikky Varun) ಅವರು ಹೀರೋ ಆಗಿಯೂ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಧನ್ಯಾ ರಾಮ್ಕುಮಾರ್ ಅಭಿನಯಿಸಿದ್ದಾರೆ. ಇತ್ತೀಚೆಗೆ ‘ಕಾಲಾಪತ್ಥರ್’ ಚಿತ್ರದಿಂದ ‘ಗೋರುಕನ ಗಾನ..’ (Gorukana Gana) ಹಾಡು ಬಿಡುಗಡೆ ಆಗಿದೆ. ಸಾಂಗ್ ರಿಲೀಸ್ ಸಮಯದಲ್ಲಿ ಅವರು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಒಂದೇ ಹಾಡಿನಲ್ಲಿ ಇಡೀ ಸಿನಿಮಾದ ಕಥೆಯ ಸಾರಾಂಶವನ್ನು ಹಿಡಿದಿಡಲಾಗಿದೆ ಎಂದು ವಿಕ್ಕಿ ವರುಣ್ ಹೇಳಿದ್ದಾರೆ. ಹೊಸ ಗಾಯಕಿ ಶಿವಾನಿ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.