‘ಕೆ. ಶಿವರಾಮ್​ ಅವರಿಗಾಗಿಯೇ ಆ ಸಿನಿಮಾ ಮಾಡಿದ್ವಿ’: ತರುಣ್​ ಸುಧೀರ್​ ಭಾವುಕ ಮಾತು

Updated on: Mar 01, 2024 | 4:31 PM

‘ಇಂದು ಶಿವರಾಮ್​ ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತುಂಬ ಶಿಸ್ತಿನಿಂದ ಇದ್ದ ಅವರು ಈ ವಯಸ್ಸಿನಲ್ಲಿ ನಿಧನರಾಗಿದ್ದಕ್ಕೆ ಬೇಸರ ಆಗುತ್ತಿದೆ. ಎಲ್ಲ ಒಳ್ಳೆಯವರಿಗೆ ಈ ರೀತಿ ಆಗುತ್ತಿದೆ ಅಂತ ನೋವಾಗುತ್ತಿದೆ’ ಎಂದು ನಿರ್ದೇಶಕ ತರುಣ್​ ಸುಧೀರ್​ ಹೇಳಿದ್ದಾರೆ. ಅಂತಿಮ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಶಿವರಾಮ್​ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಸಿನಿಮಾ ನಟ, ನಿವೃತ್ತ ಐಎಎಸ್​ ಅಧಿಕಾರಿ ಕೆ. ಶಿವರಾಮ್​ ಅವರ ನಿಧನಕ್ಕೆ (K Shivaram Death) ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಗುರುವಾರ (ಫೆ.29) ಅವರು ಇಹಲೋಕ ತ್ಯಜಿಸಿದರು. ಇಂದು (ಮಾರ್ಚ್​ 1) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು, ರಾಜಕೀಯದ ಗಣ್ಯರು, ಅಪಾರ ಸಂಖ್ಯೆಯ ಬೆಂಬಲಿಗರು ಹಾಗೂ ಅಭಿಮಾನಿಗಳು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ‘ಕಾಟೇರ’ ನಿರ್ದೇಶಕ ತರುಣ್​ ಸುಧೀರ್​ (Tharun Sudhir) ಕೂಡ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಶಿವರಾಮ್​ ಜೊತೆಗಿನ ಒಡನಾಟದ ದಿನಗಳನ್ನು ತರುಣ್​ ಸುಧೀರ್​ ನೆನಪಿಸಿಕೊಂಡಿದ್ದಾರೆ. ಕೆ. ಶಿವರಾಮ್​ (K Shivaram) ಅವರು ಕೊನೆಯದಾಗಿ ನಟಿಸಿದ್ದ ‘ಟೈಗರ್​’ ಚಿತ್ರಕ್ಕೆ ತರುಣ್​ ಸುಧೀರ್​ ಅವರು ಕಥೆ ಬರೆದಿದ್ದರು. ‘ನಾವು ಆ ಸಿನಿಮಾದ ಕಥೆ ಬರೆಯುವಾಗ ಹೀರೋ ಪ್ರದೀಪ್​ಗಿಂತಲೂ ಹೆಚ್ಚಾಗಿ ಶಿವರಾಮ್​ ಅವರ ಮೇಲೆ ನನಗೆ ಕ್ರೇಜ್​ ಇತ್ತು. ಅವರನ್ನು ಡಿಫರೆಂಟ್​ ಆಗಿ ತೋರಿಸಬೇಕು ಎಂಬ ಉದ್ದೇಶದಿಂದ ಮಾಡಿದ ಸಿನಿಮಾ ಅದು. ತುಂಬಾ ಇಷ್ಟಪಟ್ಟು ಅವರನ್ನು ಬೇರೆ ಬೇರೆ ಶೇಡ್​ಗಳಲ್ಲಿ ತೋರಿಸಿದ್ವಿ. ಅದು ಅವರ ಕೊನೆಯ ಸಿನಿಮಾ ಆಗುತ್ತದೆ ಅಂತ ನಾವು ಅಂದುಕೊಂಡಿರಲಿಲ್ಲ. ಯಾಕೆಂದರೆ, ಆ ಚಿತ್ರದ ಬಳಿಕವೂ ಅವರು ಬೇರೆ ಸಿನಿಮಾದ ಪ್ಲ್ಯಾನ್​ ಬಗ್ಗೆ ಮಾತನಾಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ತರುಣ್​ ಸುಧೀರ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More