ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್

Edited By:

Updated on: Feb 19, 2026 | 10:35 PM

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಜೊತೆ ನಿರ್ದೇಶಕ ತರುಣ್ ಸುಧೀರ್ ಅವರು ‘ಕಾಟೇರ’ ಸಿನಿಮಾ ಮಾಡಿದ್ದರು. ಆ ಚಿತ್ರ ಸೂಪರ್ ಹಿಟ್ ಆಗಿತ್ತು. ಮತ್ತೆ ಅವರಿಬ್ಬರು ಒಟ್ಟಿಗೆ ಸಿನಿಮಾ ಮಾಡಲಿ ಎಂಬುದು ಫ್ಯಾನ್ಸ್ ಆಸೆ. ಆದರೆ ಸದ್ಯಕ್ಕೆ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ.

ನಟ ದರ್ಶನ್ ಜೊತೆ ನಿರ್ದೇಶಕ ತರುಣ್ ಸುಧೀರ್ ಅವರು ‘ಕಾಟೇರ’ ಸಿನಿಮಾ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮತ್ತೆ ಅವರಿಬ್ಬರು ಜೊತೆಯಾಗಿ ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಆಸೆ. ಆದರೆ ಸದ್ಯಕ್ಕೆ ದರ್ಶನ್ (Darshan) ಅವರು ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಮುಖ್ಯ ಆರೋಪಿ ಆಗಿದ್ದಾರೆ. ಆ ಕುರಿತು ತರುಣ್ ಸುಧೀರ್ ಮಾತನಾಡಿದ್ದಾರೆ. ‘ಆದಷ್ಟು ಬೇಗ ದರ್ಶನ್ ಅವರು ಹೊರಗೆ ಬರಲಿ. ಅವರ ಕಷ್ಟದ ದಿನಗಳೆಲ್ಲ ಕಳೆಯಲಿ ಅಂತ ನಾನು ಕಾಯುತ್ತಿದ್ದೇನೆ. ಮುಂದೆ ಖಂಡಿತವಾಗಿಯೂ ಅವರು ಸಿನಿಮಾ ಮಾಡುತ್ತಾರೆ. ಯಾವತ್ತು ಅವರು ನನ್ನನ್ನು ಕರೆದು, ಅವಕಾಶ ಕೊಟ್ಟು, ಸಿನಿಮಾ ಮಾಡೋಣ ಎನ್ನುತ್ತಾರೋ ಮರುದಿನವೇ ನಾನು ರೆಡಿ. ನಾವು ಸ್ಕ್ರಿಪ್ಟ್ ಕೂಡ ರೆಡಿ ಇಟ್ಟುಕೊಂಡಿರುತ್ತೇವೆ. ಆ ಕಾಲ ಬರಲಿ ಅಂತ ಕಾಯುತ್ತಿದ್ದೇವೆ’ ಎಂದು ತರುಣ್ ಸುಧೀರ್ (Tharun Sudhir) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 19, 2026 09:40 PM