‘ಕಾಟೇರ’ ಚಿತ್ರಕ್ಕೆ ತೆಲುಗು, ತಮಿಳಿನಿಂದ ಬಂತು ಬೇಡಿಕೆ; ಬ್ರೇಕಿಂಗ್ ನ್ಯೂಸ್ ಕೊಟ್ಟ ತರುಣ್ ಸುಧೀರ್
‘ಕಾಟೇರ’ ಯಶಸ್ಸಿನ ಬಳಿಕ ತರುಣ್ ಸುಧೀರ್ ಪ್ರತಿಕ್ರಿಯೆ ನೀಡಿದ್ದಾರೆ. ‘ಈಗ ಹಿಂದಿ, ತಮಿಳು, ತೆಲುಗಿನಿಂದ ಕರೆಗಳು ಬರುತ್ತಿವೆ. ಅದಕ್ಕೆ ನಾವು ಮೊದಲೇ ಪ್ರಿಪೇರ್ ಆಗಿದ್ದೆವು. ರಾಕ್ಲೈನ್ ವೆಂಕಟೇಶ್ ಅವರು ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ದರ್ಶನ್ ನಟನೆಯ ‘ಕಾಟೇರ’ ಸಿನಿಮಾ (Kaatera Movie) ನೋಡಿ ಕನ್ನಡಿಗರು ಭೇಷ್ ಎಂದಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರೆ ಕರ್ನಾಟಕದಲ್ಲಿ ಸೂಪರ್ ಹಿಟ್ ಆದ ಬಳಿಕ ತೆಲುಗು, ತಮಿಳಿನಿಂದ ಬೇಡಿಕೆ ಬಂದಿದೆ ಪರಭಾಷೆಗೂ ಡಬ್ ಮಾಡಿ ‘ಕಾಟೇರ’ ಸಿನಿಮಾವನ್ನು ಬಿಡುಗಡೆ ಮಾಡಲು ಪ್ಲ್ಯಾನ್ ನಡೆದಿದೆ. ಆ ಬಗ್ಗೆ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಇದೇ ಕಥೆಯನ್ನು ಡಬ್ಬಿಂಗ್ ಮಾಡಿದರೆ ಅದು ಪ್ಯಾನ್ ಇಂಡಿಯಾ. ಈಗ ಹಿಂದಿ, ತಮಿಳು, ತೆಲುಗಿನಿಂದ ಕರೆಗಳು ಬರುತ್ತಿವೆ. ಅದಕ್ಕೆ ನಾವು ಮೊದಲೇ ಪ್ರಿಪೇರ್ ಆಗಿದ್ದೆವು. ಡಬ್ ಮಾಡಬೇಡಿ ಅಂತ ದರ್ಶನ್ ಅವರು ಎಂದಿಗೂ ಹೇಳಿಲ್ಲ. ರಾಕ್ಲೈನ್ ವೆಂಕಟೇಶ್ ಅವರು ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.