‘ಕಾರ್ತಿಕ್ಗೆ ಸ್ವಲ್ಪ ಆತುರ ಜಾಸ್ತಿ’: ತನಿಶಾ ಕುಪ್ಪಂಡ ಹೀಗೆ ಹೇಳಿದ್ದು ಯಾಕೆ?
‘ಕಾರ್ತಿಕ್ ಅವರಿಗೆ ಸ್ವಲ್ಪ ಆತುರ ಜಾಸ್ತಿ. ತಾನೇ ಮಾಡಿದ್ದು ಎಂಬ ಫೀಲಿಂಗ್ ಅವರಲ್ಲಿ ಇದೆ. ಅದು ಅವರಿಗೆ ಉಲ್ಟಾ ಆಗಿದ್ದೂ ಇದೆ’ ಎಂದು ತನಿಶಾ ಕುಪ್ಪಂಡ ಹೇಳಿದ್ದಾರೆ. ತನಿಷಾ ಹೇಳಿದ ಈ ಮಾತುಗಳನ್ನು ನಮ್ರತಾ ಗೌಡ ವಿರೋಧಿಸಿದ್ದಾರೆ. ಕಾರ್ತಿಕ್ ಕೂಡ ಇದನ್ನು ಒಪ್ಪಿಕೊಂಡಿಲ್ಲ.
ಫಿನಾಲೆ ದಿನಾಂಕ ಹತ್ತಿರ ಆದಂತೆಲ್ಲ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಪೈಪೋಟಿ ತಾರಕಕ್ಕೇರುತ್ತಿದೆ. ಕಾರ್ತಿಕ್ ಮಹೇಶ್ (Karthik Mahesh) ಅವರು ಮೊದಲಿನಿಂದಲೂ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೆ ಅವರಿಗೆ ಆತರು ಜಾಸ್ತಿ ಎಂದು ತನಿಶಾ ಕುಪ್ಪಂಡ (Tanisha Kuppanda) ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಂದು ಹೊಸ ಟಾಸ್ಕ್ ನೀಡಲಾಗಿದೆ. ಅದನ್ನು ಆಡಲು ಯಾರು ಅನರ್ಹರು ಎಂದು ಕೇಳಿದ್ದಕ್ಕೆ ಕಾರ್ತಿಕ್ ಹೆಸರನ್ನು ತನಿಶಾ ಹೇಳಿದ್ದಾರೆ. ‘ಕಾರ್ತಿಕ್ ಅವರಿಗೆ ಸ್ವಲ್ಪ ಆತುರ ಜಾಸ್ತಿ. ತಾನೇ ಮಾಡಿದ್ದು ಎಂಬ ಫೀಲಿಂಗ್ ಅವರಲ್ಲಿ ಇದೆ. ಅದು ಅವರಿಗೆ ಉಲ್ಟಾ ಆಗಿದ್ದೂ ಇದೆ’ ಎಂದು ತನಿಶಾ ಕುಪ್ಪಂಡ ಹೇಳಿದ್ದಾರೆ. ತನಿಶಾ ಅವರ ಮಾತುಗಳನ್ನು ನಮ್ರತಾ ಗೌಡ ವಿರೋಧಿಸಿದ್ದಾರೆ. ಕಾರ್ತಿಕ್ ಕೂಡ ಇದನ್ನು ಒಪ್ಪಿಕೊಂಡಿಲ್ಲ. ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಜನವರಿ 2ರಂದು ರಾತ್ರಿ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.