ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಭಾರಿ ಸಮಸ್ಯೆ

Edited By:

Updated on: Jun 02, 2026 | 11:03 AM

ಮುಂಗಾರು ಮಳೆಯ ಆಗಮನದ ವಿಳಂಬದಿಂದಾಗಿ ಕಬಿನಿ ಜಲಾಶಯದ ಹಿನ್ನೀರು ಬತ್ತುತ್ತಿದ್ದು, ನಾಗರಹೊಳೆ ಅಭಯಾರಣ್ಯದ ಕಾಡಾನೆಗಳು ಹಸಿರು ಹುಲ್ಲು ಸಿಗದೆ ಒಣ ನೆಲದಲ್ಲಿ ಮಣ್ಣು ಒದ್ದು ಆಹಾರ ಹುಡುಕುತ್ತಿರುವ ಕರುಣಾಜನಕ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆನೆಗಳ ಸಂಕಷ್ಟ ಹಾಗೂ ಅವುಗಳು ಕಾಲಿನಿಂದ ಕೆದಕಿ ಹುಲ್ಲು ತಿನ್ನುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

ಮೈಸೂರು, ಜೂನ್ 2: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ವ್ಯಾಪ್ತಿಯ ಕಬಿನಿ ಜಲಾಶಯದ ಹಿನ್ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ತೀವ್ರ ಆಹಾರದ ಕೊರತೆ ಎದುರಾಗಿದೆ. ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಹಸಿರು ಸಂಪೂರ್ಣವಾಗಿ ಮಾಯವಾಗಿದ್ದು, ತಿನ್ನಲು ಹಸಿರು ಹುಲ್ಲು ಸಿಗದೆ ಕಾಡಾನೆಗಳು ಪರದಾಡುತ್ತಿವೆ. ಅಲ್ಪ ಪ್ರಮಾಣದ ಮಳೆಯಿಂದಾಗಿ ಅಲ್ಲಲ್ಲಿ ಮಾತ್ರ ಗರಿಕೆ ಬೆಳೆದಿದ್ದು, ಆನೆಗಳು ಕಾಲಿನಿಂದ ಒಣಗಿದ ಮಣ್ಣನ್ನು ಒದ್ದು, ಹುಲ್ಲಿನ ಬೇರುಗಳನ್ನು ಬೇರ್ಪಡಿಸಿ ತಿನ್ನುತ್ತಿರುವ ದೃಶ್ಯ ಕಾಣಿಸಿದೆ. ನೀರಿಲ್ಲದ ಬಣಗುಡುತ್ತಿರುವ ನೆಲದಲ್ಲಿ ಆಹಾರಕ್ಕಾಗಿ ಕಾಡಾನೆಗಳು ಪರದಾಡುತ್ತಿರುವ ಅಪರೂಪದ ದೃಶ್ಯ ಜಿ.ಎಸ್. ರವಿಶಂಕರ್ ಎಂಬುವವರ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us